ಮಳೆಗಾಗಿ ಪ್ರಾರ್ಥಿಸಿ ಗಮಕ ವಾಚನ

ಚಿತ್ರದುರ್ಗ: ಉತ್ತಮ ಮಳೆಯಾಗಿ ಬರದ ದವಡೆಯಲ್ಲಿ ಸಿಲುಕಿ ನರಳುತ್ತಿರುವ ನಾಡಿನ ಜನ, ಜಾನುವಾರುಗಳ ಸಂಕಷ್ಟ ದೂರ ಮಾಡುವಂತೆ ಪ್ರಾರ್ಥಿಸಿ ಚಿತ್ರದುರ್ಗ ಗಮಕ ಕಲಾ ಪರಿಷತ್, ಜೆಸಿಆರ್ ಬಡಾವಣೆ ಗಣಪತಿ ದೇವಾಲಯದಲ್ಲಿ ಇತ್ತೀಚೆಗೆ ವಿರಾಟ ಪರ್ವ ಗಮಕ ವಾಚನ ಆಯೋಜಿಸಿತ್ತು.

ಬೆಳಗ್ಗೆ ಗಣಪತಿ ಹಾಗೂ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಬಳಿಕ ಹನುಮಾನ್ ಚಾಲೀಸ ಪಠಣ, ಸಾಮೂಹಿಕ ಭಜನೆ ಹಾಗೂ ಮಾಡಲಾಯಿತು. ಸಂಜೆ ವಿರಾಟ ಪರ್ವ ವಾಚನ ನಡೆಯಿತು.

ರಾಜೇಶ್ವರಿ ವಾಚಿಸಿ, ರಮಾದೇವಿ ವ್ಯಾಖ್ಯಾನ ನೀಡಿದರು. ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಹಾಗೂ ಅರ್ಚಕ ನಾಗರಾಜ ಶಾಸ್ತ್ರಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *