ಶುಭಗಳಿಗೆ ಮೀರುತ್ತದೆ ಎಂಬ ಗಡಿಬಿಡಿಯಲ್ಲಿ ನಾಮಪತ್ರ ಸಲ್ಲಿಕೆ: ಆಸ್ತಿ ಪ್ರಮಾಣ ಪತ್ರ ನೀಡದ ಸಂಸದ ಚಂದ್ರಪ್ಪ

ಚಿತ್ರದುರ್ಗ : ಹಾಲಿ ಸಂಸದ‌‌‌ ಬಿ.ಎನ್​. ಚಂದ್ರಪ್ಪ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 1.35 ರೊಳಗೆ ಶುಭಗಳಿಗೆ ಮೀರುತ್ತದೆ ಎಂಬ ಗಡಿಬಿಡಿಯಲ್ಲಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ವೇಳೆ‌ ಸಂಸದರು ಆಸ್ತಿ ಪ್ರಮಾಣ ಸಲ್ಲಿಸದೇ ಇದ್ದುದ್ದು, ನಾಳೆ‌‌ ಮತ್ತೊಂದು ಸೆಟ್ ಸಲ್ಲಿಸುವ‌‌‌ ವೇಳೆ ಪ್ರಮಾಣ ಪತ್ರ ನೀಡಲಿದ್ದಾರೆ.

ಶಕ್ತಿ ಪ್ರದರ್ಶನ : ನಾಮ ಪತ್ರ ಸಲ್ಲಿಕೆ ಮೊದಲು ನಗರದ ‌ಕನಕ ವೃತ್ತದಿಂದ ಮೆರವಣಿಗೆ ಆರಂಭವಾಗಿ ಒನಕೆ ಒಬವ್ವ ವೃತ್ತ ತಲುಪಿತು. ಈ ವೇಳೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತ ಒಟ್ಟಾಗಿ ಮೆರವಣಿಗೆ ಮಾಡಿದರು.

ಮೆರವಣಿಗೆ ಮಧ್ಯೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಚಂದ್ರಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ , ಶಾಸಕ ರಘುಮೂರ್ತಿ, ಮಾಜಿ ಶಾಸಕ ಗೋವಿಂದಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ ಸಾಥ್ ನೀಡಿದರು.