ಅಂತೂ ಕರುಣೆ ತೋರಿದ ವರುಣ

ಚಿತ್ರದುರ್ಗ: ತೀವ್ರ ಬಿಸಿಲಿನಿಂದ ಕಂಗೆಟ್ಟ ಜಿಲ್ಲೆಯ ಮೇಲೆ ವರುಣ ಕೃಪೆ ತೋರಿದ್ದಾನೆ. ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೂ ಸುರಿದ ಮಳೆ ವಾತಾವರಣವನ್ನು ತಂಪು ಮಾಡಿದೆ.

ನಗರದಲ್ಲಿ ಸಾಧಾರಣ ಎನಿಸಿದರೂ ಜಿಲ್ಲೆಯ ವಿವಿಧೆಡೆ ಮಳೆಯ ಆರ್ಭಟ ಜೋರಾಗಿತ್ತು. ಹೊಳಲ್ಕೆರೆ, ನಾಯಕನಹಟ್ಟಿ, ಮೊಳಕಾಲ್ಮೂರು, ಚಳ್ಳಕೆರೆಯಲ್ಲಿ ಉತ್ತಮ ಮಳೆಯಾಗಿದೆ. ಸಿರಿಗೆರೆಯಲ್ಲಿ ಆಲೀಕಲ್ಲು ಮಳೆ ಸುರಿಯಿತು. ಮನೆಯಿಂದ ಹೊರ ಬಂದ ಜನ ಆಲಿಕಲ್ಲು ಆಯ್ದುಕೊಂಡು ಸಂಭ್ರಮಿಸಿದರು.

ಭಾನುವಾರ ರಾತ್ರಿ ಒಂದಷ್ಟು ಕಾಲ ಆರ್ಭಟದಿಂದ ಸುರಿದಿದ್ದ ಮಳೆ ಸೋಮವಾರ ಬಿಡುವು ನೀಡಿತ್ತು. ಮಂಗಳವಾರ ಬಿರುಸಾದ ಗಾಳಿಯಿಲ್ಲದ ಕಾರಣ ಮೋಡಗಳು ಚದುರದೇ ಮಳೆ ಸುರಿಯಲು ಸಾಧ್ಯವಾಯಿತು.

ಚಳ್ಳಕೆರೆ ತಾಲೂಕಿನಲ್ಲಿ ಬಿರುಗಾಳಿ ಸಹಿತ ಮಳೆಗೆ ಚಿಕ್ಕಮ್ಮನಹಳ್ಳಿ ಗ್ರಾಮದ ಓಬಯ್ಯ, ಹನುಮಂತಪ್ಪ ಎಂಬುವರ ಗುಡಿಸಲುಗಳ ಶೀಟ್‌ಗಳು ಹಾರಿ ಹೋಗಿವೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ.

ಹೊಳಲ್ಕೆರೆಯಲ್ಲಿ ಮುಕ್ಕಾಲು ಗಂಟೆ ಬಿರುಸಾಗಿ ಮಳೆ ಸುರಿಯಿತು. ಈ ಪರಿಣಾಮ ಚರಂಡಿಗಳು ತುಂಬಿ ಹರಿದವು. ಗಾಳಿ ಮಳೆಗೆ ಕೆಲವೆಡೆ ಹಣ್ಣು ಹೂವಿನ ಬುಟ್ಟಿಗಳು ನೆಲಕ್ಕುರುಳಿದ್ದವು. ಇದರಿಂದ ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಯಿತು.

ಗಿರಿಯಮ್ಮನಳ್ಳಿ ಹಳ್ಳಕ್ಕೆ ಜೀವಕಳೆ : ನಾಯಕನಹಟ್ಟಿ ಹೋಬಳಿಯ ತಳಕು ಕೆರೆಗೆ ನೀರುಣಿಸುವ ಗಿರಿಯಮ್ಮನಹಳ್ಳಿ ಹಳ್ಳ ತುಂಬಿ ಹರಿಯುತ್ತಿದೆ. ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾದ್ದರಿಂದ ಹಳ್ಳ ತುಂಬಿ ತಳಕು ಕೆರೆಗೆ ಹರಿದಿದೆ. ಇದನ್ನು ನೋಡಲು ಹಲವಾರು ರೈತರು ನೆರೆದಿದ್ದರು. ಯುವಕರು ನೀರಿನಲ್ಲಿ ಈಜಾಡಿ ಸಂತಸ ಪಟ್ಟರು. ಕುಡಿಯುವ ನೀರಿಗೂ ತತ್ವಾರ ಇರುವ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಹಳ್ಳ ಹರಿಯುತ್ತಿರುವುದು ಜನರ ಸಂತಸ ಇಮ್ಮಡಿಗೊಳಿಸಿದೆ.

ನಾಯಕನಹಟ್ಟಿ ಹೋಬಳಿಯ ತಳಕು ಕೆರೆಗೆ ನೀರುಣಿಸುವ ಗಿರಿಯಮ್ಮನಹಳ್ಳಿ ಹಳ್ಳ ತುಂಬಿ ಹರಿಯುತ್ತಿದೆ. ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾದ್ದರಿಂದ ಹಳ್ಳ ತುಂಬಿ ತಳಕು ಕೆರೆಗೆ ಹರಿದಿದೆ. ಇದನ್ನು ನೋಡಲು ಹಲವಾರು ರೈತರು ನೆರೆದಿದ್ದರು. ಯುವಕರು ನೀರಿನಲ್ಲಿ ಈಜಾಡಿ ಸಂತಸ ಪಟ್ಟರು. ಕುಡಿಯುವ ನೀರಿಗೂ ತತ್ವಾರ ಇರುವ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಹಳ್ಳ ಹರಿಯುತ್ತಿರುವುದು ಜನರ ಸಂತಸ ಇಮ್ಮಡಿಗೊಳಿಸಿದೆ.

Leave a Reply

Your email address will not be published. Required fields are marked *