sanehalli panditaradhya swamiji

ರೆಸಾರ್ಟ್ ರಾಜಕಾರಣಕ್ಕೆ ಸಾಣೇಹಳ್ಳಿ ಶ್ರೀ ಆಕ್ರೋಶ

ಚಿತ್ರದುರ್ಗ: ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಸಾವಿರಾರು ತಾಯಂದಿರು ಬೆಂಗಳೂರಿಗೆ ಕಾಲ್ನಡಿಗೆ ಹೊರಟಿದ್ದರೆ, ಆ ಪುಣ್ಯಾತ್ಮರೆಲ್ಲ ರೆಸಾರ್ಟ್ ಕಡೆ ಹೊರಟಿದ್ದಾರೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕುಟುಕಿದರು.

ನಗರದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಶನಿವಾರ ಮಹಿಳೆಯರ ಬೆಂಗಳೂರು ಚಲೋಗೆ ಚಾಲನೆ ನೀಡಿ ಮಾತನಾಡಿ, ಜನರ ನೋವಿಗೆ ಸ್ಪಂದಿಸಬೇಕಿದ್ದ ರಾಜಕಾರಣಿಗಳಿಗೆ ಸಾಮಾಜಿಕ ಬದ್ಧತೆಯಿಲ್ಲದೆ ಜನರ ನೋವು ಸಹ ಅರ್ಥವಾಗುತ್ತಿಲ್ಲ ಎಂದು ಬೇಸರಿಸಿದರು.

ಸರ್ಕಾರಕ್ಕೆ ನಿಜಕ್ಕೂ ಸಮಾಜ ಬದುಕಬೇಕೆನ್ನುವ ಚಿಂತನೆಯಿದ್ದರೆ ಜ.30ರ ವರೆಗೂ ಕಾಯುವ ಅವಶ್ಯಕತೆಯಿಲ್ಲ. ತಕ್ಷಣ ತೀರ್ಮಾನ ತೆಗೆದುಕೊಳ್ಳುವ ಹೇಳಿಕೆಯನ್ನು ನಾವು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದರು.

ನಿಮ್ಮ ರಾಜಕೀಯ ಏನೇ ಇರಲಿ, ನಿಮ್ಮ ಸರ್ಕಾರ ಎಷ್ಟು ದಿನ ಇರುತ್ತೋ ಅದು ಬೇಡ, ಜತೆಗೆ ಆ ವಿಷಯವೂ ನಮಗೆ ಮುಖ್ಯವಲ್ಲ. ಇರುವಷ್ಟು ದಿನ ಜನ ನೆನಪಿಸಿಕೊಳ್ಳುವ ಕಾರ್ಯ ನಿಮ್ಮ ಸರ್ಕಾರದಿಂದ ನಡೆಯಬೇಕೆಂದು ಬಯಸುತ್ತೇವೆ. ಈ ವಿಷಯದಲ್ಲಿ ದೃಢ ನಿರ್ಧಾರ ಕೈಗೊಂಡರೆ ಮುಂದಿನ ಚುನಾವಣೆಗಳಲ್ಲಿ ಖಂಡಿತ ಲಾಭವಾಗುತ್ತದೆ ಎಂದು ತಿಳಿಸಿದರು. ( ವಿವರಕ್ಕೆವಿಜಯವಾಣಿ ಓದಿ)