ಸಾಹಿತ್ಯಕ್ಕೆ ಬದ್ಧವಾದರೆ ಸಂತಸ ಲಭ್ಯ

ಚಿತ್ರದುರ್ಗ: ಮನಸ್ಸು ಸಾಹಿತ್ಯಕ್ಕೆ ಬದ್ಧವಾದರೆ ಬದುಕು ಆಹ್ಲಾದಕರವಾಗುತ್ತದೆ ಎಂದು ಹಿರಿಯ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.

ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟ್ಯ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯ ಪ್ರವೇಶಕ್ಕೂ ಮುನ್ನ ಮಾನಸಿಕವಾಗಿ ಕೆಲವು ಸಿದ್ಧತೆ ಅಗತ್ಯ. ಆಗ ಮಾತ್ರ ನಾವು ಬದ್ಧರಾಗಿ ಮತ್ತೊಬ್ಬರಿಗೆ ಮಾದರಿಯಾಗಬಹುದೆಂದು ತಿಳಿಸಿದರು.

ಅನಾಥ ಮಕ್ಕಳಿಗೆ ಪುಸ್ತಕ ವಿತರಣೆ ಮಾಡುತ್ತಿರುವುದು ಒಳ್ಳೆ ಬೆಳವಣಿಗೆ. ಬಡತನದ ಹಿನ್ನೆಲೆಯುಳ್ಳವರು ಗ್ರಾಮೀಣ ಪ್ರದೇಶದ ಮಕ್ಕಳು ಅಪರಿಮಿತ ಸಾಧನೆ ಮಾಡಿದ್ದಾರೆ. ಅಂತವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪಿ.ವಿ.ಮಲ್ಲಿಕಾರ್ಜುನಯ್ಯ, ಗೋಪಾಲಕೃಷ್ಣ ಕಟ್ಟೇತ್ತಿಲ, ದೇವಿ ಪ್ರಸಾದ್ ಶೆಟ್ಟಿ, ಕೇಶವ ಶಕ್ತಿ ನಗರ, ಡಾ.ಪಡ್ಡಂಭೈಲು ಕೃಷ್ಣಪ್ಪ ಗೌಡ, ಡಾ.ಶೇಖರ ಅಜೆಕಾರು ಅವರಿಗೆ ಮದಕರಿ ನಾಯಕ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಬಸವರಾಜ ಟಿ.ಬೆಳಗಟ್ಟ, ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ, ನಿವೃತ್ತ ಪ್ರಾಧ್ಯಾಪಕಿ ಯಶೋಧಾ ರಾಜಶೇಖರಪ್ಪ, ಪಿ.ವಿ.ಪ್ರದೀಪ್ ಕುಮಾರ್, ಲೇಖಕ ಎಚ್.ಆನಂದಕುಮಾರ್, ವಿ.ಕೆ.ಶಂಕರಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *