ಉಚ್ಚಂಗಿ ಯಲ್ಲಮ್ಮ ಸಿಡಿ ಉತ್ಸವ

ಚಿತ್ರದುರ್ಗ: ನಗರದ ದೊಡ್ಡಪೇಟೆಯಲ್ಲಿ ಶನಿವಾರ ರಾಜ ಉತ್ಸವಾಂಬ ಶ್ರೀ ಉಚ್ಚಂಗಿ ಯಲ್ಲಮ್ಮ ದೇವಿ ಸಿಡಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.

ಹರಕೆ ಹೊತ್ತ ಭಕ್ತರು ಸಾಂಪ್ರದಾಯದಂತೆ ಉಪವಾಸ ಆಚರಿಸಿ ಮೆರವಣಿಗೆಯಲ್ಲಿ ದೇವಸ್ಥಾನದ ಆವರಣಕ್ಕೆ ಆಗಮಿಸಿದರು. ಬಳಿಕ ಸಿಡಿ ಕಂಬಕ್ಕೆ ನಮಸ್ಕರಿಸಿ ಏರುತ್ತಿದ್ದಂತೆ ಉಧೋ..ಉಧೋ..ಉಧೋ…ಘೋಷಣೆ ಮೊಳಗಿದವು. ಮಳೆಯಿಲ್ಲದೆ ತತ್ತರಿಸಿದ್ದೇವೆ ಇನ್ನಾದರೂ ಮಳೆ ತಾರವ್ವ ಎಂದು ಭಕ್ತರು ಪ್ರಾರ್ಥಿಸಿದರು.

ಸಿಡಿ ಉತ್ಸವದ ಅಂಗವಾಗಿ ಮುಂಜಾನೆತಯಿಂದಲೇ ದೇವಸ್ಥಾನದಲ್ಲಿ ದೇವಿಗೆ ಭಂಡಾರದ ಪೂಜೆ ಸಲ್ಲಿಸಲಾಯಿತು. ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಿದ್ದ ದೇವಿಯನ್ನು ಕಣ್ತುಂಬಿಕೊಂಡರು. ನವ ದಂಪತಿಗಳು, ಮಕ್ಕಳು ಸಿಡಿ ಕಂಬ ಮುಟ್ಟಿ ದೇವರ ಕೃಪೆಗ ಪಾತ್ರರಾದರು.

Leave a Reply

Your email address will not be published. Required fields are marked *