ವರುಣ ಕೃಪೆಗೆ ಕಪ್ಪೆಗೆ ಕಂಕಣ ಭಾಗ್ಯ

ಚಿತ್ರದುರ್ಗ: ಮಳೆಗಾಗಿ ಪ್ರಾರ್ಥಿಸಿ ನಗರದ ಕೆಳಗೋಟೆಯಲ್ಲಿ ಬುಧವಾರ ಕಪ್ಪೆಗಳಿಗೆ ಮದುವೆ ಮಾಡಲಾಯಿತು.

ಮಾರಮ್ಮನ ದೇವಸ್ಥಾನದಲ್ಲಿ ನೆರೆದ ಸಾರ್ವಜನಿಕರು ಹೆಣ್ಣು ಮತ್ತು ಗಂಡಿನ ಕಡೆಯವರೆಂದು ಎರಡು ಭಾಗಗಳಾಗಿ ಶಾಸ್ತ್ರೋಸ್ತವಾಗಿ ವಿವಾಹ ಮಹೋತ್ಸವ ನಡೆಸಿದರು. ಬಳಿಕ ಕಪ್ಪೆಗಳಿದ್ದ ಹಲಗೆಯನ್ನು ಬಾಲಕನ ತಲೆ ಮೇಲಿಟ್ಟು ಮೆರವಣಿಗೆ ಮಾಡಲಾಯಿತು. ಮುತ್ತೈದೆಯರು ಆರ್ಶೀವದಿಸಿದರು.

ಶೀಘ್ರ ಮಳೆ ಬಂದು ಭೂಮಿ ತಂಪಾಗಲಿ, ರೈತರು ಬಿತ್ತನೆ ಮಾಡಿ ದೇಶಕ್ಕೆ ಅನ್ನ ನೀಡಲಿ, ಬಡವರಿಗೆ ಉದ್ಯೋಗ ಸಿಗಲಿ ಎಂದು ಪ್ರಾರ್ಥಿಸಿದರು. ಮದುವೆ ಪೌರೋಹಿತ್ಯವನ್ನು ಮಾರಮ್ಮ ದೇವಸ್ಥಾನ ಪೂಜಾರಿ ಮಾರಣ್ಣ ವಹಿಸಿದ್ದರು. ಮದುವೆಗೆ ಬಂದವರು ಅನ್ನ, ಪಾಯಸ, ಸಾಂಬರ್ ಊಟ ಸವಿದರು. ಚಿಕ್ಕ ಮಕ್ಕಳು ಮದುವೆ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದರು.

ನಿವಾಸಿಗಳಾದ ಲಕ್ಷ್ಮೀ ದೇವಮ್ಮ, ಪಾಲಮ್ಮ, ಮಾರಪ್ಪ, ಓಬಮ್ಮ, ಮಾರಕ್ಕ, ರತ್ನಮ್ಮ, ಮಾರಣ್ಣ, ಮಂಜುನಾಥ್, ಕುಮಾರ, ಓಬಣ್ಣ ಸೇರಿದಂತೆ ಇತರರಿದ್ದರು.