ಚಿತ್ರದುರ್ಗ: ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗಳಿಗೆ 2020-21ನೇ ಸಾಲಿನ ನೇರ ನೇಮಕಕ್ಕೆ ಸಂಬಂಧಿಸಿದಂತೆ ಅರ್ಜಿ ಸ್ವೀಕಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪಿಎಸ್‌ಎಸ್ ಸಿವಿಲ್-431, ಪಿಎಸ್‌ಐ ಸಿವಿಲ್ (ಕಲ್ಯಾಣ ಕರ್ನಾಟಕ) 125 ಹುದ್ದೆಗಳಿಗೆ ನೇರ ನೇಮಕ ಕುರಿತಂತೆ ಜೂ.1ರಿಂದ 30ರ ವರೆಗೆ ಅರ್ಜಿ ಅಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸುವ ಮುಂದಿನ ದಿನಾಂಕವನ್ನು ನಂತರದಲ್ಲಿ ಪ್ರಕಟಿಸಲಾಗುವುದು ಎಂದು ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ.