17ಕ್ಕೆ ಕಾತ್ರಾಳ್ ಕೆರೆ ಬಳಿ ಪ್ರತಿಭಟನೆ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳನ್ನು ತುಂಬಿಸುವ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ಒತ್ತಾ ಯಿಸಿ ರೈತ ಸಂಘ ಜೂನ್ 17ರಂದು ಮಧ್ಯಾಹ್ನ 12 ಗಂಟೆಗೆ ರಾ.ಹೆ.48ರ ಕಾತ್ರಾಳ್ ಕ್ರಾಸ್ ಬಳಿ ಪ್ರತಿಭಟನೆ ನಡೆಸಲಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕ್ರಪ್ಪ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲ್ಲಾಪುರ, ಕಾತ್ರಾಳ್, ಮುದ್ದಾಪುರ, ಯಳಗೋಡು ಹಾಗೂ ಸುಲ್ತಾನಿಪುರ ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದೆ ಎಂದು ತಿಳಿಸಿಸದರು.

ಕೆ.ಸಿ.ರೆಡ್ಡಿ ವರದಿಯಂತೆ ಮಾರ್ಗ ಬದಲಾವಣೆಗೆ ಅವಕಾಶವಿಲ್ಲ. ಆದರೂ ಹಿಂದಿನ ಸಿಎಂ ಸಿದ್ದರಾಮಯ್ಯ ಅಧಿಕಾರಾವಧಿ ಕೊನೆಯ ಲ್ಲಿ ಮಾರ್ಗ ಬದಲಾವಣೆ ಬೇಡಿಕೆ ಕುರಿತಂತೆ ರಚಿಸಿದ್ದ ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿ ಡಿ.ಎನ್.ದೇಸಾಯಿ ನೇತೃತ್ವದ ಸಮಿತಿ ಒಂದು ಸಭೆ ನಡೆಸಿದೆ, ವರದಿ ಕೊಟ್ಟಿಲ್ಲ. ಜೂ.18ರಂದು ಮತ್ತೆ ಈ ಸಮಿತಿ ಸಭೆ ಸೇರಲಿದೆ. ಈ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದರು.

ಮುಖಂಡರಾದ ಸುರೇಶ್‌ಬಾಬು, ಸಿ.ಆರ್.ತಿಮ್ಮಣ್ಣ, ಎಂ.ಬಿ.ತಿಪ್ಪೇಸ್ವಾಮಿ, ರುದ್ರಸ್ವಾಮಿ, ಧನಂಜಯ ಮತ್ತಿತರರು ಇದ್ದರು.