ನಾಲ್ವರು ಸುಲಿಗೆಕೋರರ ಬಂಧನ

ಚಿತ್ರದುರ್ಗ: ನಗರದ ಹೊರವಲಯ ಉಪಾಧ್ಯಾಯ ಹೋಟೆಲ್ ಬಳಿ ನಿಂತಿದ್ದ ಲಾರಿಯ ಚಾಲಕನ ಮೇಲೆ ಬಿಯರ್ ಬಾಟ್ಲಿಯಿಂದ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದ ನಾಲ್ವರು ಸುಲಿಗೆಕೋರರನ್ನು ಬಡಾವಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ವಾರದ ಹಿಂದೆ ಹೊಸಪೇಟೆಯಿಂದ ಸ್ಪಾಂಜ್ ಲೋಡ್ ಮಾಡಿಕೊಂಡು ದಾಬಸ್ ಪೇಟೆಗೆ ಹೋಗುತ್ತಿದ್ದ ಲಾರಿ ನಿಂತಿದ್ದಾಗ ಈ ಕೃತ್ಯ ಎಸಗಿ 11500 ರೂ. ನಗದು, ಮೊಬೈಲ್‌ಗಳೊಂದಿಗೆ ಪರಾರಿಯಾಗಿದ್ದ ಆರೋಪಿಗಳಾದ ಪಾಂಡುರಂಗ, ರವಿತೇಜ, ರಮೇಶ್ ಹಾಗೂ ಸಿದ್ದೇಶನನ್ನು ಬಂಧಿಸಿ 4 ಮೊಬೈಲ್, ಒಂದು ಆಟೋವನ್ನು ಕೋಟೆ ಸಿಪಿಐ ಪ್ರಕಾಶ ಗೌಡ ಪಾಟೀಲ್, ಬಡಾವಣೆ ಪಿಎಸ್‌ಐ ಡಿ.ಜಿ.ಪರಮೇಶ್ ಮತ್ತವರ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಮೂವರು ಕಳ್ಳರ ಬಂಧನ: ಮೊಬೈಲ್, ಟಿವಿ ಹಾಗೂ ಬೈಕ್ ಕಳವು ಮಾಡಿಕೊಂಡು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಮೂವರನ್ನು ನಗರದ ಚಳ್ಳಕೆರೆ ಗೇಟ್ ಬಳಿ ಶನಿವಾರ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಕುಮಾರ್, ಮಹಾಲಿಂಗಪ್ಪ ಹಾಗೂ ಧನುಷ್‌ನನ್ನು ಬಂಧಿಸಿ, 6 ಮೊಬೈಲ್, ಎಲ್‌ಇಡಿ ಟಿವಿ ಹಾಗೂ ಬೈಕ್‌ನ್ನು ಬಡಾವಣೆ ಪಿಎಸ್‌ಐ ಡಿ.ಜಿ.ಪರಮೇಶ್ ಮತ್ತವರ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.