ಪ್ರತ್ಯೇಕ ಬೆಳೆ ವಿಮೆ ಯೋಜನೆಗೆ ರಾಜ್ಯ ಸರ್ಕಾರ ಚಿಂತನೆ

Latest News

1300 ಕೋಟಿ ರೂಪಾಯಿ ಅನುದಾನ ಕೊಟ್ಟಾಗ ಕಳ್ಳ ಬಿಲ್ ಮಾಡಿ ದುಡ್ಡು ಲಪಟಾಯಿಸಿದರು ಎಂದ ಎಚ್​ಡಿಕೆ

ಬೆಂಗಳೂರು: ಅವರು ಎರಡನೇ ಬಾರಿ ನನ್ನ ಬೆನ್ನಿಗೆ ಚೂರಿ ಹಾಕಿದ್ರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಟಿಕೆಟ್ ಕೊಡಲು ನಿರಾಕರಿಸಿದ್ದೆ. ಆದರೆ ದೇವೇಗೌಡರನ್ನು...

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ ಬಾಂಗ್ಲಾ, ಪಿಂಕ್​ ಬಣ್ಣದ ಸ್ವೀಟ್ಸ್ ಫೋಟೋ ಶೇರ್​ ಮಾಡಿದ ಗಂಗೂಲಿ!

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ...

ಚನ್ನರಾಯಪಟ್ಟಣದಲ್ಲಿ ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಚನ್ನರಾಯಪಟ್ಟಣ: ಸೋಲು-ಗೆಲುವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ಪಟ್ಟಣದ ನವೋದಯ ಸಂಘದ ಶಾಲಾ ಆವರಣದಲ್ಲಿ ನವೋದಯ ವಿದ್ಯಾ ಸಂಘದ ವತಿಯಿಂದ...

ಚನ್ನರಾಯಪಟ್ಟಣದಲ್ಲಿ ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಚನ್ನರಾಯಪಟ್ಟಣ: ಸೋಲು-ಗೆಲುವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ಪಟ್ಟಣದ ನವೋದಯ ಸಂಘದ ಶಾಲಾ ಆವರಣದಲ್ಲಿ ನವೋದಯ ವಿದ್ಯಾ ಸಂಘದ ವತಿಯಿಂದ...

ಗಂಡಸಿ ಗ್ರಾಮದಲ್ಲಿ ಕಾರ್ತಿಕ‌ ಮಹೋತ್ಸವ

ಅರಸೀಕೆರೆ:ತಾಲೂಕಿನ ಗಂಡಸಿ ಗ್ರಾಮದಲ್ಲಿರುವ ಶ್ರೀ ಶಂಭುಲಿಂಗೇಶ್ವರ ದೇಗುಲದ ಆವರಣದಲ್ಲಿ ಕಾರ್ತಿಕ ಮಹೋತ್ಸವ ಆಯೋಜಿಸಲಾಗಿತ್ತು. ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ಶ್ರೀ ವೀರಸೋಮೇಶ್ವರ ಪ್ರಸನ್ನ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡು...

ಚಿತ್ರದುರ್ಗ: ಪ್ರತ್ಯೇಕ ಬೆಳೆ ವಿಮೆ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಎಚ್.ಎನ್. ಶಿವಶಂಕರ ರೆಡ್ಡಿ ಹೇಳಿದರು.
ಶರಣಸಂಸ್ಕೃತಿ ಉತ್ಸವ ಅಂಗವಾಗಿ ಮಂಗಳವಾರ ಮುರುಘಾ ಮಠದಲ್ಲಿ ನಡೆದ ಕೃಷಿ ಮೇಳ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ ನೋಟ ಉದ್ಘಾಟಿಸಿ ಮಾತನಾಡಿದರು.

ಬೆಳೆ ವಿಮೆ ಗೊಂದಲಗಳ ನಿವಾರಣೆಗೆ ರಾಜ್ಯ ಕೇಂದ್ರಕ್ಕೆ ಈಗಾಗಲೇ ಮನವಿ ಮಾಡಿದೆ. ಈ ವಿಷಯದಲ್ಲಿ ರೈತರಿಗೆ ಅನ್ಯಾಯ ತಪ್ಪಿಸಲು ಪ್ರತ್ಯೇಕ ಬೆಳೆ ವಿಮೆಗೆ ಆಂಧ್ರ ಮಾದರಿಯಲ್ಲಿ ಇನ್ ಪುಟ್ ಸಬ್ಸಿಡಿ ನೀಡಲು ಯೋಚಿಸಲಾಗಿದೆ ಎಂದು ತಿಳಿಸಿದರು.

ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಅಪ್ಪರ್ ಭದ್ರಾಗೆ 5 ಸಾವಿರ ಕೋಟಿ ರೂ. ಬಿಡುಗಡೆ ಹಾಗೂ ಸಾಸ್ವೇಹಳ್ಳಿ ಏತ ನೀರಾವರಿ ಕುರಿತಂತೆ ಚರ್ಚಿಸಲು ಸದ್ಯದಲ್ಲೇ ಶರಣರು,ಸಿಎಂ, ನೀರಾವರಿ ಹಾಗೂ ಕೃಷಿ ಸಚಿವರ ಸಮ್ಮುಖದಲ್ಲಿ ವಿಶೇಷ ಸಭೆ ಕರೆಯಲಾಗುವುದು ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, 12,340 ಕೋಟಿ ರೂ. ವೆಚ್ಚದ ಅಪ್ಪರ್ ಭದ್ರಾಗೆ ಇದುವರೆಗೆ 2300 ಕೋಟಿ ರೂ . ಖರ್ಚಾಗಿದೆ. ಈ ವರ್ಷ 720 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ತ್ವರಿತ ಅನುಷ್ಠಾನಕ್ಕೆ 5000ಕೋಟಿ ರೂ. ಬಿಡುಗಡೆಗೆ ಒತ್ತಾಯಿಸಿದರು.

ಭದ್ರಾ ಮೇಲ್ದಂಡೆಯಡಿ ಎಲ್ಲ ಕೆರೆಗಳನ್ನು ಭರ್ತಿ, ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನ, ವಿವಿ ಸಾಗರಕ್ಕೆ 5 ಟಿಎಂಸಿ ಅಡಿ ನೀರು ಹರಿಸದಿದ್ದರೆ ಮುಂದಿನ 10 ವರ್ಷದಲ್ಲಿ ಕುಡಿವ ನೀರಿಲ್ಲದೆ ಜಿಲ್ಲೆ ದಯನೀಯ ಪರಿಸ್ಥಿತಿ ಎದುರಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಾಯೋಗಿಕವಾಗಿ ನೀರು: ಡಿಸೆಂಬರೊಳಗೆ ಪ್ರಾಯೋಗಿಕವಾಗಿ ಜಿಲ್ಲೆಗೆ ಭದ್ರಾ ನೀರು ಹರಿಯಲಿದೆ ಎಂದು ಯೋಜನೆ ಮುಖ್ಯ ಇಂಜಿನಿಯರ್ ಶಿವಕುಮಾರ್ ಹೇಳಿದರು.ಆರಂಭದ 1.07 ಕ್ಷ ಹೆಕ್ಟೇರ್ ಬದಲು 2.25 ಲಕ್ಷ ಹೆಕ್ಟೇರ್‌ಗೆ ನೀರುಣಿಸಲಾಗುವುದು. ದೇಶದಲ್ಲೇ ಮೊದಲ ಬಾರಿ 6.50 ಲಕ್ಷ ಹೆ. ಹನಿ ನೀರಾವರಿ ಮೂಲಕ ನೀರು ಒದಗಿಸಲಾಗುವುದು.

4-5 ವರ್ಷದಲ್ಲಿ ಕಾಮಗಾರಿ ಪೂರ್ಣವಾಗಲಿದೆ. 10 ವರ್ಷದಲ್ಲಿ 7 ವರ್ಷ ಭದ್ರಾ ಡ್ಯಾಂ ಭರ್ತಿಯಾಗಲಿದೆ. ಖಾರೀಫ್ ಬೆಳೆಗೆ ಶೇ. 100ರಷ್ಟು ನೀರು ದೊರೆಯಲಿದೆ. ಯೋಜನೆ ಅನುಷ್ಠಾನ ಬಳಿಕ ಪ್ರತಿ ವರ್ಷ ಜೂ. 15 ರಿಂದ ನೀರು ಸಿಗಲಿದೆ ಎಂದರು.

ಮುಖಂಡರಾದ ಸಿದ್ದವೀರಪ್ಪ, ಟಿ. ನುಲೇನೂರು ಶಂಕ್ರಪ್ಪ, ಹನುಮಲಿ ಷಣ್ಮುಖಪ್ಪ ಮಾತನಾಡಿದರು. ಕಲಾವಿದ ವಿ.ಟಿ. ಕಾಳೆ, ಸಾವಯವ ಕೃಷಿಕ ಸೋಮುನಾಥ ರೆಡ್ಡಿ ಪೂರ್ಮ, ರೈತ ಮುಖಂಡ ಭೂತಯ್ಯ ಅವರನ್ನು ಗೌರವಿಸಲಾಯಿತು. ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಇತರರಿದ್ದರು.
ಚಿತ್ರದುರ್ಗದ ಅಂಜನಾ ನೃತ್ಯ ಕಲಾ ಕೇಂದ್ರ ಹಾಗೂ ನಾಟ್ಯರಂಜಿನಿ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.

ಅಮೃತ್‌ಮಹಲ್ ಜೋಡೆತ್ತು ಪ್ರಥಮ: ಮಠದಲ್ಲಿ ಆಯೋಜಿಸಿದ್ದ ಉತ್ತಮ ಜೋಡೆತ್ತುಗಳ ಪ್ರದರ್ಶನದಲ್ಲಿ ಗೊಡಬನಹಳ್ಳಿಯ ವಿಶಾಲ್ ಪಾಟೀಲ್ ಅವರ ಅಮೃತ್‌ಮಹಲ್ ತಳಿಯ ಜೋಡೆತ್ತುಗಳಿಗೆ ಪ್ರಥಮ ಬಹುಮಾನ ಲಭಿಸಿದೆ. ಇವುಗಳ ಮೌಲ್ಯ 1.60 ಲಕ್ಷ ರೂ., ಕರುವಾಗಿದ್ದಾಗ ಇವುಗಳನ್ನು ಅಜ್ಜಂಪುರದಿಂದ ತರಲಾಗಿತ್ತು.

ಬಚ್ಚಬೋರನಹಟ್ಟಿ ಪಾಲಯ್ಯ ಅವರ ಎತ್ತುಗಳು ದ್ವಿತೀಯ, ಮದಕರಿಪುರದ ಸಣ್ಣರಂಗಪ್ಪನ ಎತ್ತುಗಳು ತೃತೀಯ ಬಹುಮಾನಕ್ಕೆ ಪಾತ್ರವಾದವು. ಜರ್ಸಿ, ಎಚ್‌ಎಫ್, ಅಮೃತ್ ಮಹಲ್ ಮತ್ತು ಗಿರ್ ತಳಿಯ 22 ಜತೆ ಎತ್ತುಗಳು, ಮುರ‌್ರಾ ತಳಿಯ 6 ಎಮ್ಮೆಗಳು, 12 ಕಾಳಗದ ಟಗರು, ಅಸೀಲ್ ತಳಿಯ ಎರಡು ಕಾಳಗದ ಕೋಳಿಗಳು ಪ್ರದರ್ಶನಕ್ಕೆ ಬಂದಿದ್ದವು.

ಪ್ರಥಮ(10,100 ರೂ.), ದ್ವಿತೀಯ (7 ಸಾವಿರ ರೂ.), ತೃತೀಯ (5 ಸಾವಿರ ರೂ.) ಹಾಗೂ 10 ಜತೆ ಎತ್ತುಗಳಿಗೆ ಸಾವಿರ ರೂ.ನಗದು, ಪ್ರಮಾಣ ಪತ್ರ ವಿತರಿಸಲಾಯಿತು. ಮೂರು ಎಮ್ಮೆಗಳಿಗೆ ತಲಾ ಒಂದು ಸಾವಿರ ರೂ., ಎಲ್ಲ ರಾಸುಗಳ ಮಾಲೀಕರಿಗೆ ಪ್ರಮಾಣ ಪತ್ರಗಳನ್ನು ಅಥಣಿ ಶ್ರೀ ಶಿವಬಸವ ಸ್ವಾಮೀಜಿ, ದಾವಣಗೆರೆಯ ಶ್ರೀ ಬಸವಕುಮಾರ ಸ್ವಾಮೀಜಿ ವಿತರಿಸಿದರು.

ಶ್ವಾನಗಳ ಪ್ರದರ್ಶನ: ಥಾಯ್‌ಲ್ಯಾಂಡ್ ಮೂಲದ ಶಿಜ್ಜು ತಳಿ ಸುಂದರಿ, ಚೀನಾ ತಳಿ ಚೌಚೌ, ಪಗ್ , ಗ್ರೇಟ್‌ಡೆನ್ ಮೊದಲಾದ ಕಿರು- ದೊಡ್ಡ ತಳಿ ಹಾಗೂ ಕರ್ನಾಟಕದ ಹೆಮ್ಮೆಯ ಮುಧೋಳ್ ಶ್ವಾನಗಳು ಶ್ವಾನ ಪ್ರದರ್ಶನದಲ್ಲಿ ಗಮನ ಸೆಳೆದವು.

ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್, ಮುಧೋಳ್, ಗೋಲ್ಡನ್ ರೆಟ್ರಾವರ್, ಸೈಬೀರಿಯ ನ್ ಹಸ್ಕಿ, ರಾಟ್‌ವಿಲ್ಲರ್, ಅಮೆರಿಕನ್ ಬುಲ್‌ಡಾಗ್, ಬಾಕ್ಸರ್, ಫ್ರೆಂಚ್‌ಬುಲ್‌ಡಾಗ್ ಸೇರಿದಂತೆ 20ಕ್ಕೂ ಹೆಚ್ಚು ತಳಿಗಳ ಅಂದಾಜು 100 ಶ್ವಾನಗಳು ಪ್ರದರ್ಶನಕ್ಕೆ ಬಂದಿದ್ದವು.

ಮಾಲಿಕರ ಜತೆ ಆಟೋ, ಕಾರು, ಬೈಕ್‌ಗಳಿಮದ ಇಳಿದು ಬರುತ್ತಿದ್ದ ಅವುಗಳ ಗತ್ತು, ವೈಯ್ಯರ ನೋಡಗರನ್ನು ಆಕರ್ಷಿಸಿತು. ಪ್ರದರ್ಶನವನ್ನು ಡಾ. ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಿದರು. ನಾನಾ ಮಠಾಧೀಶರು ಸಮ್ಮುಖ ವಹಿಸಿದ್ದರು.

ಬಹುಮಾನ: ಚಿತ್ರದುರ್ಗದ ಸುಬಹ್ಮಣ್ಯ ಅವರ ಡಾಬರ್ ಮನ್(ಪ್ರ), ಮನು ಅವರ ಮುಧೋಳ್(ದ್ವಿ). ರೋಹಿತ್ ಅವರ ಫ್ರೆಂಚ್ ಬುಲ್‌ಡಾಗ್ ತೃತೀಯ ಬಹುಮಾನ ಪಡೆದವು. ಕ್ರಮವಾಗಿ 10, 7, 5 ಸಾವಿರ ರೂ. ಮತ್ತು ಪಾರಿತೋಷಕ ವಿತರಿಸಲಾಯಿತು. ತಳಿವಾರು 20 ಶ್ವಾನಗಳ ಮಾಲೀಕರಿಗೆ ತಲಾ ಒಂದು ಸಾವಿರ ರೂ. ವಿತರಿಸಲಾಯಿತು.

ಗಮನ ಸೆಳೆದ ಕೃಷಿ ಮೇಳ: ಕೃಷಿ ಮೇಳದಲ್ಲಿ ಪ್ರದರ್ಶಿಸಿದ್ದ ಡ್ರೋನ್ ಮೂಲಕ ಔಷಧ ಸಿಂಪಡಿಸುವ ಯಂತ್ರ ಗಮನ ಸೆಳೆಯಿತು. ಯಂತ್ರಕ್ಕೆ ಅಂದಾಜು 5.20 ಲಕ್ಷ ರೂ. ಗಳಿದ್ದು, 15 ನಿಮಿಷದಲ್ಲಿ ಒಂದು ಎಕರೆ ಜಮೀನಿಗೆ ಔಷಧ ಸಿಂಪಡಿಸಬಹುದಾಗಿದೆ.

ಬೆಂಗಳೂರು ಕೃಷಿ ವಿವಿ, ಅಂಚೆ ಇಲಾಖೆ, ನಂದಿನಿ ಹಾಲು ಒಕ್ಕೂಟ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿ, ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಬಯೋಡೀಸೆಲ್, ಜೇನು ಸಾಕಣಿಕೆ ಮತ್ತು ತೆಂಗು ಬೆಳೆ, ಕೃಷಿ ಉಪಕರಣ, ಕೃಷಿಭಾಗ್ಯ ಹಾಗೂ ಕೃಷಿಹೊಂಡ ನಿರ್ಮಾಣ, ಮಾದರಿ ಜಲಾನಯನ, ರೇಷ್ಮೆ, ಡ್ರೈಲ್ಯಾಂಡ್ ತೋಟಗಾರಿಕೆ, ಹನಿ ನೀರಾವರಿ, ಪಶು ಸಂಗೋಪನೆ, ಮೀನುಗಾರಿಕೆ, ನೀರು ಸಂರಕ್ಷಣೆ, ಮಣ್ಣಿನ ಸವಕಳಿ ಮೊದಲಾದ ಮಾಹಿತಿಗಳ ಮಳಿಗೆಗಳನ್ನು ತೆರೆಯಲಾಗಿತ್ತು.

ಭದ್ರಾ ಮೇಲ್ದಂಡೆ ಯೋಜನೆ ಮಳಿಗೆ ಪ್ರಥಮ, ಕೃಷಿ ಇಲಾಖೆ ದ್ವಿತೀಯ ಹಾಗೂ ತೋಟಗಾರಿಕೆ ಇಲಾಖೆ ತೃತೀಯ ಬಹುಮಾನ ಪಡೆದವು.

- Advertisement -

Stay connected

278,667FansLike
575FollowersFollow
611,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...