ನೇರ ರೈಲ್ವೆ ಸಂಪರ್ಕ ರಾಷ್ಟ್ರೀಯ ವಿಚಾರ ಸಂಕಿರಣ

ಚಿತ್ರದುರ್ಗ: ನಗರದ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಫೆ.26 ರ ಬೆಳಗ್ಗೆ 10 ಕ್ಕೆ ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲ್ವೆ ಸಂಪರ್ಕ- ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.

ವಿಚಾರ ಸಂಕಿರಣವನ್ನು ಡಾ.ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಲಿದ್ದು, ರಾಜ್ಯ ಆರ್ಥಿಕ ಪರಿಷತ್ ಅಧ್ಯಕ್ಷ ಡಾ.ಆರ್. ಜಯಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದರಾದ ಬಿ.ಎನ್.ಚಂದ್ರಪ್ಪ, ಜಿ.ಎಂ.ಸಿದ್ದೇಶ್ವರ್, ಮುದ್ದಹನುಮೇಗೌಡ, ಮಾಜಿ ಸಂಸದರಾದ ಎಚ್.ಹನುಮಂತಪ್ಪ, ಜನಾರ್ದನಸ್ವಾಮಿ, ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕೋದಂಡರಾಮಯ್ಯ ಮತ್ತಿತರರು ಭಾಗವಹಿಸಲಿದ್ದಾರೆ.

ಹಂಪಿ ವಿವಿಯ ಡಾ.ಜನಾರ್ದನ, ಕಂಪ್ಲಿ ಪದವಿ ಕಾಲೇಜಿನ ಡಾ.ಜೆ.ಕೃಷ್ಣ, ಕೃಷ್ಣದೇವರಾಯ ವಿವಿಯ ಡಾ.ಬಸವರಾಜ ಚೆನ್ನಿ,ದಾವಣಗೆರೆ ವಿವಿಯ ಡಾ.ಕೆ.ಬಿ.ರಂಗಪ್ಪ, ಪ್ರೊ.ಪುಟ್ಟಸ್ವಾಮಿ ವಿಷಯ ಮಂಡಿಸಲಿದ್ದಾರೆ. ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಉಪನ್ಯಾಸಕರಿಗೆ ಒಒಡಿ ಸೌಲಭ್ಯವಿರುತ್ತದೆ ಎಂದು ಸಂಘಟನಾ ಕಾರ್ಯದರ್ಶಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ತಿಳಿಸಿದ್ದಾರೆ.