ವೇಣು ನಿವಾಸಕ್ಕೆ ಶರಣರ ಭೇಟಿ

ಚಿತ್ರದುರ್ಗ: ಅನಾರೋಗ್ಯಕ್ಕೆ ಒಳಗಾಗಿದ್ದ ಕಾದಂಬರಿಕಾರ ಬಿ.ಎಲ್.ವೇಣು ಅವರನ್ನು ಚಿತ್ರದುರ್ಗದ ಅವರ ನಿವಾಸಕ್ಕೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಸೋಮವಾರ ಭೇಟಿ ನೀಡಿ, ಶೀಘ್ರ ಗುಣಮುಖರಾಗುವಂತೆ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ವೇಣು ತಮ್ಮ ಕೃತಿಗಳೊಂದಿಗೆ ಶರಣರಿಗೆ ಭಕ್ತಿ ಸಮರ್ಪಿಸಿದರು. ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಇತರರಿದ್ದರು.

Leave a Reply

Your email address will not be published. Required fields are marked *