More

    ಕನ್ನಡದ ಅಪೂರ್ವ ಮೂರ್ತಿ ಚಿಮೂ

    ಚಿತ್ರದುರ್ಗ: ದಿಟ್ಟ ನಿಲುವುಗಳ ಮೂಲಕವೇ ಚಿದಾನಂದ ಮೂರ್ತಿ ಕನ್ನಡಕ್ಕೆ ಕೊಡುಗೆ ನೀಡಿದ ಚಿಂತಕ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಸ್ಮರಿಸಿದ್ದಾರೆ.

    ಸತ್ಯ, ನಿಷ್ಠೆ, ಪ್ರಖರ ಪ್ರತಿಭೆ, ವೈಚಾರಿಕ ಸಾಮರ್ಥ್ಯಕ್ಕೆ ಮತ್ತೊಂದು ಹೆಸರು ಚಿಮೂ.ಕನ್ನಡದ ಉಳಿವಿಗೆ ಅವರು ಮಾಡಿದ ಹೋರಾಟ ಅನನ್ಯ.

    ಶ್ರೀಮಠ ಅವರ ನಡುವೆ ಅವಿನಾಭಾವ ಸಂಬಂಧವಿತ್ತು. ನಾಡು-ನುಡಿ, ವಚನ ಸಾಹಿತ್ಯದ ವಿಚಾರಗಳನ್ನು ನಾವು ಖುದ್ದಾಗಿ ಚರ್ಚಿಸುತ್ತಿದ್ದೆವು.

    ದಾವಣಗೆರೆಯಲ್ಲಿ ಜಯದೇವ ವಿದ್ಯಾರ್ಥಿನಿಲಯದ ವಿದ್ಯಾರ್ಥಿಯಾಗಿದ್ದರು. ಶ್ರೀಮಠವು ಚಿಮೂ ಅವರಿಗೆ ಜಯದೇವಶ್ರೀ ನೀಡಿ ಗೌರವಿಸಿದೆ ಎಂದು ನೆನಪಿಸಿಕೊಂಡರು.

    ಒನಕೆ ಚಳವಳಿಯಲ್ಲಿ ಭಾಗವಹಿಸಿದ್ದರು: ಟಿಪ್ಪು ಜಯಂತಿ ಕೈ ಬಿಡಲು ಒತ್ತಾಯಿಸಿ ಚಿತ್ರದುರ್ಗದಲ್ಲಿ 2016 ನ.2ರಂದು ನಡೆದ ಒನಕೆ ಚಳವಳಿಯಲ್ಲಿ ಚಿಮೂ ಭಾಗವಹಿಸಿದ್ದರು. ಟಿಪ್ಪುವಿನ ನಿಜ ಚಿತ್ರ ಏನು? ಈ ಜಯಂತಿ ಬೇಕೆ? ಎಂದು ಮಾತನಾಡಿದ್ದರು.

    ಹಸನ್ಮುಖದಿಂದ ಸ್ವೀಕರಿಸುತ್ತಿದ್ದರು: ಚಿಮೂ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೆ ಎಂದು ಇತಿಹಾಸಕ ಸಂಶೋಧಕ ಡಾ.ಬಿ.ರಾಜಶೇಖರಪ್ಪ ನೆನೆದಿದ್ದಾರೆ. ಮುರುಘಾ ಮಠ ಸೇರಿಜಿಲ್ಲೆಯ ಅಗತ್ಯ ಮಾಹಿತಿಗೆ ನನ್ನ ಜತೆ ಮಾತನಾಡಿದ್ದರು. ದುರ್ಗಕ್ಕೆ ಬಂದಾಗ ಚಂದ್ರವಳ್ಳಿ, ಕೋಟೆ ಇತರೆಡೆ ಓಡಾಡಿದ್ದರು. ಅಭಿಪ್ರಾಯಗಳೆಡೆ ವ್ಯಕ್ತವಾದ ವಿರೋಧಗಳನ್ನು ಅವರು ಹಸನ್ಮುಖರಾಗಿ ಸ್ವೀಕರಿಸುತ್ತಿದ್ದರು ಎಂದು ಸ್ಮರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts