More

  ನಾಳೆ ಸಾಮೂಹಿಕ ವಿವಾಹ ಮಹೋತ್ಸವ

  ಚಿತ್ರದುರ್ಗ: ಮುರುಘಾ ಮಠದಲ್ಲಿ 30ನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಜ.5ರಂದು ಜರುಗಲಿದೆ.

  ಹಾವೇರಿ ಜಿಲ್ಲೆ ಅಕ್ಕಿ ಆಲೂರಿನ ಚೆನ್ನವೀರೇಶ್ವರ ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಶಂಕರ ಜೊಲ್ಲೆ, ಕೃಷಿ ಮಾರಾಟ ಇಲಾಖೆ ನಿರ್ದೇಶಕ ಸಿ.ಎಸ್.ಕರಿಗೌಡ ಭಾಗವಹಿಸುವರು.

  ಸಂಜೆ 6.30ಕ್ಕೆ ಬ್ಯಾಂಕ್ ಕಾಲನಿಯ ಮುರುಘ ರಾಜೇಂದ್ರ ಆಟದ ಮೈದಾನದಲ್ಲಿ ಶರಣ ಸಂಗಮ ಕಾರ್ಯಕ್ರಮ ನಡೆಯಲಿದೆ. ಮುರುಘಾ ಶರಣರು ಅಧ್ಯಕ್ಷತೆ ವಹಿಸಲಿದ್ದಾರೆ. ವಚನ ವಿಧಾನ ಮತ್ತು ಸಂವಿಧಾನ ವಿಷಯ ಕುರಿತು ದಾವಣಗೆರೆಯ ಆರ್.ಎಲ್.ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಸೋಮಶೇಖರ್ ವಿಷಯಾವಲೋಕನ ಮಾಡಲಿದ್ದಾರೆ. ಬ್ಯಾಂಕ್ ಕಾಲನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಭಾಗವಹಿಸಲಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts