ಬಿಎಸ್‌ವೈರಿದ ಆಶಾದಾಯಕ ಬಜೆಟ್

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಈ ಬಾರಿ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಸಿಗದಿದ್ದರೂ ನೀರಾವರಿ ನಿಗಮಕ್ಕೆ ಕೊಟ್ಟಿರುವ ಅನುದಾನದಲ್ಲೇ ಈ ಯೋಜನೆ ತ್ವರಿತ ಅನುಷ್ಠಾನ ಸಾಧ್ಯವಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ವಿವಿಧೆಡೆ ಅಂದಾಜು 5.25 ಕೋಟಿ ರೂ. ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಬಜೆಟ್‌ನಲ್ಲಿ ಜಿಲ್ಲೆಗೆ ವಿವಿಧ ಅನುದಾನಗಳು ದೊರಕಿವೆ. ಬಸವ ಪ್ರತಿಮೆಗೆ 20 ಕೋಟಿ ರೂ., ನಿಜಲಿಂಗಪ್ಪ ನಿವಾಸಕ್ಕೆ 5 ಕೋಟಿ ರೂ., ಶುದ್ಧೀಕರಿಸಿದ ನೀರು ಮರುಬಳಕೆಗೆ ಅನುದಾನ ದೊರಕಿದೆ ಎಂದರು.

ಕೃಷಿ ಸಂಚಾರಿ ಹೆಲ್ತ್ ಕ್ಲಿನಿಕ್, ಶೀತಲ ಗೃಹಗಳ ಸ್ಥಾಪನೆ, ವೀರ ಮದಕರಿ ನಾಯಕ ಹಾಗೂ ಒನಕೆ ಓಬವ್ವರನ್ನು ನೆನಪಿಸುವ ದುರ್ಗವನ್ನು ಮುಖ್ಯ ಪ್ರವಾಸತಾಣವನ್ನಾಗಿ ಅಭಿವೃದ್ಧಿ ಪಡಿಸುವುದಾಗಿ ಸಿಎಂ ಹೇಳಿದ್ದು, ಇದೊಂದು ಆಶಾದಾಯಕ ಬಜೆಟ್ ಆಗಿದ್ದು,
ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಸಿಎಂ ಪ್ರತ್ಯೇಕ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿರುವ ಮನೆ ದಾಖಲೆಗಳನ್ನು ನಗರಸಭೆಗೆ ವರ್ಗಾಯಿಸಬೇಕು ಎಂದು ನಗರದ ರೈಲು ನಿಲ್ದಾಣ ಬಳಿ ನಾಗರಿಕರು ಶಾಸಕರಲ್ಲಿ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ತಿಪ್ಪಾರೆಡ್ಡಿ, ನಗರಕ್ಕೆ ಹೊಂದಿಕೊಂಡಿರುವ ಎಂ.ಕೆ.ಹಟ್ಟಿ, ಚೋಳಗಟ್ಟ, ಮದಕರಿಪುರ, ಮೇದೆಹಳ್ಳಿ ಗ್ರಾಪ ಪಿಡಿಒಗಳ ಸಭೆಯನ್ನು ಶೀಘ್ರ ಕರೆಯುವಂತೆ ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು ಅವರಿಗೆ ಸೂಚಿಸಿದರು.

ನಗರಸಭೆ ಸದಸ್ಯ ವೆಂಕಟೇಶ್, ಇಂಜಿನಿಯರ್ ಮೋಹನ್ ಮತ್ತಿತರ ಪ್ರಮುಖರು ಇದ್ದರು.

Share This Article

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ