ಪ್ರತಿ ಮನೆಯಲ್ಲಿ ಒಬ್ಬ ಸೈನಿಕ ಹುಟ್ಟಲಿ

ಚಿತ್ರದುರ್ಗ: ದೇಶದ ಪ್ರತಿ ಪ್ರಜೆಯೂ ಸೈನಿಕನ ಮನಸ್ಥಿತಿ ಹೊಂದಬೇಕೆಂದು ನಿವೃತ್ತ ಕ್ಯಾಪ್ಟನ್ ಮಹೇಶ್ವರಪ್ಪ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ವಂದೇಮಾತರಂ ಜಾಗೃತಿ ವೇದಿಕೆ ಮಂಗಳವಾರ ಆಯೋಜಿಸಿದ್ದ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಗ್ರರ ಕೃತ್ಯಕ್ಕೆ ಯೋಧರು ಪ್ರಾಣ ತೆತ್ತಿದ್ದಾರೆ. ಅವರ ಆತ್ಮಕ್ಕೆ ನಿಜವಾಗಿಯೂ ಶಾಂತಿ ಸಿಗಬೇಕಾದರೆ ಪ್ರತಿ ಮನೆಯಲ್ಲಿ ಒಬ್ಬ ಸೈನಿಕ ಹುಟ್ಟಿ ದೇಶಸೇವೆ ಮಾಡಬೇಕು ಎಂದರು.
ಪಾಕಿಸ್ತಾನ ಭಾರತ ಕೊಟ್ಟ ಭಿಕ್ಷೆ. ಆದರೆ, ಅದೇ ಈಗ ಭಾರತಕ್ಕೆ ಶತ್ರುವಾಗಿದೆ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಮೇಲೆ ದಿಗ್ಬಂದನ ಹಾಕಿದಾಗ ಮಾತ್ರ ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್ ಮಾತನಾಡಿ, ಯೋಧರಿಗೆ ಜಾತಿ ಅಂಟಿಸಬೇಡಿ. ಪ್ರತಿಯೊಬ್ಬರೂ ದೇಶಕ್ಕಾಗಿ ದುಡಿಯಬೇಕು ಎಂದರು.
ಫಾದರ್ ಎಂ.ಎಸ್.ರಾಜು, ಜಾಗೃತಿ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಯುವ ಘಟಕದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಟಿ. ಆನಂದ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ ಗೌರಣ್ಣ, ನಗರ ಘಟಕ ಅಧ್ಯಕ್ಷ ಮಂಜುನಾಥ್ ಇದ್ದರು.