ಚಿತ್ರದುರ್ಗ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸ್ಲಂ ಮತ್ತು ಅಸಂಘಟಿತ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೆರವನ್ನು ವಿಸ್ತರಿಸಬೇಕೆಂದು ಒತ್ತಾಯಿಸಿ ಸ್ಲಂ ಜನಾಂದೋಲನ ಜಿಲ್ಲಾ ಕಾರ‌್ಯಕರ್ತರು ಮಂಗಳವಾರ ವಿವೇಕಾನಂದ ನಗರದಲ್ಲಿ ಪ್ರತಿಭಟಿಸಿದರು.
ನಗರದ ನಾನಾ ಕೊಳೆಗೇರಿಗಳಲ್ಲಿರುವ ಬೀದಿ ವ್ಯಾಪಾರಿಗಳು, ಮನೆಗೆಲಸದವರು, ಬೀಡಿ ಕಾರ್ಮಿಕರು, ಹಮಾಲಿಗಳು, ಖಾಸಗಿ ಬಸ್ ಮತ್ತು ಟ್ರಕ್ ಚಾಲಕರು, ಚಿಂದಿ ಆಯುವವರು, ದೇವದಾಸಿಯರು ಹಾಗೂ ಮಂಗಳಮುಖಿಯರಿಗೆ ಸರಕಾರ ವಿಶೇಷ ನೆರವು ನೀಡಬೇಕು. ಮೂಲೆಗುಂಪಾದ ಪ್ರತಿ ಸಮುದಾಯಗಳ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಯೋಜನೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸ್ಲಂ ಜನಾಂದೋಲನ ಜಿಲ್ಲಾಧ್ಯಕ್ಷ ಎಂ.ಮಹೇಶ್, ಜಿಲ್ಲಾ ಸಂಚಾಲಕ ಟಿ. ಮಂಜಣ್ಣ, ಜಿಲ್ಲಾ ಉಪಾಧ್ಯಕ್ಷೆ ಮಾಲತಿ, ರಾಜ್ಯಸಮಿತಿ ಸದಸ್ಯ ಕೆ.ರಾಜಣ್ಣ, ಸಲಹಾ ಸಮಿತಿ ಸದಸ್ಯ ಜಗದೀಶ್ ಮತ್ತಿತರರು ಇದ್ದರು.