ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ವೀರಗಲ್ಲು

ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರಿನ ರವಿಕುಮಾರ್ ಜಮೀನಿನಲ್ಲಿ ಪತ್ತೆಯಾದ ಕ್ರಿ.ಶ.12-13ನೇ ಶತಮಾನದ ಹೊಯ್ಸಳರ ಕಾಲದ ವೀರಗಲ್ಲನ್ನು ಇತ್ತೀಚೆಗೆ ನಗರದ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಯಿತು.

ಪತ್ತೆಯಾಗಿರುವ ವೀರಗಲ್ಲು ಮೂರು ಪಟ್ಟಿಕೆಗಳಿಂದ ಕೂಡಿದ್ದು, ಪಟ್ಟಿಕೆ ಮಧ್ಯಭಾಗದಲ್ಲಿ ಐದು ಸಾಲುಗಳ ಶಾಸನವಿದೆ. ಮಹಾಸಾಮಂತಾಧಿಪತಿ ಮಾಚನಾಯಕನ ಕಾಲದಲ್ಲಿ ಆಶ್ವೀಜ ಶುದ್ಧ ವಿಜಯ ದಶಮಿಯಂದು ಮೃತನಾದ ವೀರನಿಗೆ ನೀಡುವ ಮತ್ತರು-ಭೂಮಿ ದಾನ ನೀಡಿದ ಉಲ್ಲೇಖವಿದೆ.

ಅಕ್ಷರಗಳು ಅಲ್ಲಲ್ಲಿ ಅಳಿಸಿ ಹೋಗಿದ್ದು, ಶಿವಮೊಗ್ಗದ ಇತಿಹಾಸ ಸಂಶೋಧಕ ಡಾ.ಜಗದೀಶ್ ಅವರು ಶಾಸನ ಓದಲು ಸಹಕರಿಸಿದ್ದಾರೆ ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *