ಚಿತ್ರದುರ್ಗಕ್ಕೆ ಜಗಳೂರು ಸೇರ್ಪಡೆ ಆಗಲಿ

ಜಗಳೂರು : ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಹೋರಾಟ ಸಮಿತಿಯ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕು ಹಲವು ವರ್ಷಗಳಿಂದಲೂ ಹಿಂದುಳಿದಿದ್ದು, ಕೂಲಿ, ವ್ಯವಸಾಯವೇ ಆಧಾರವಾಗಿವೆ. ವಿದರ್ಭ ಯೋಜನೆ, ಕೈಗಾರೀಕರಣ, ಕೃಷಿ ಅಭಿವೃದ್ಧಿ, ಉದ್ಯೋಗ ಅವಕಾಶ ಇಲ್ಲಿ ಮರೀಚಿಕೆಯಾಗಿವೆ. ಇನ್ನುನೀರಾವರಿ ಯೋಜನೆಗಳು ಕೇವಲ ಭರವಸೆಯಾಗಿ ಉಳಿದಿವೆ ಎಂದರು.

ಬರಪೀಡಿತ ತಾಲೂಕಿನ ಘೋಷಣೆ ಮಾಡಿದೆ. ಆದರೆ ಈವರೆಗೆ ಪರಿಹಾರದ ಹಣವೇ ಬಂದಿಲ್ಲ. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳೆ ಪರಿಹಾರ ನೀಡಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪಿಸಿರುವುದರಿಂದ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ. ಆದರೆ ತಾಲೂಕಿಗೆ ಯಾವುದೇ ಅವಕಾಶಗಳು ಸಿಗುತ್ತಿಲ್ಲ ಎಂದು ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಿಎಂ, ಚಿತ್ರದುರ್ಗ ಜಿಲ್ಲೆಗೆ ಜಗಳೂರು ಮರು ಸೇರ್ಪಡೆ ವಿಚಾರವಾಗಿ ನಡೆಸುತ್ತಿರುವ ಹೋರಾಟ ನಮ್ಮ ಗಮನಕ್ಕೆ ಬಂದಿದೆ. ಬಜೆಟ್ ಮಂಡನೆ ನಂತರ ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಹೆಚ್ಚಿನ ಮಾಹಿತಿಗೆ ವಿಜಯವಾಣಿ ಓದಿ