ಸಂಶೋಧರ ಸಹಕಾರದಿಂದ ಯಶಸ್ಸು

ಚಿತ್ರದುರ್ಗ: ನನ್ನ ಬೆಳವಣಿಗೆಯಲ್ಲಿ ಪ್ರೊ.ಲಕ್ಷ್ಮಣ ತೆಲಗಾವಿ ಅವರ ರೀತಿ ಅನೇಕ ಸಂಶೋಧಕರ ಪಾತ್ರ ಇದೆ ಎಂದು ಸಾಹಿತಿ ಬಿ.ಎಲ್.ವೇಣು ಸ್ಮರಿಸಿದರು.

ಅಭಿಮಾನಿಗಳು ಕೋಟೆ ಆವರಣದಲ್ಲಿ ತಮ್ಮ 74ನೇ ಜನ್ಮದಿನದ ಅಂಗವಾಗಿ ಕೋಟೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಮಾತನಾಡಿದರು.

ನಗರದ ಕರುವಿನಕಟ್ಟೆ ಸರ್ಕಲ್‌ನಲ್ಲಿ ಹುಟ್ಟದಿದ್ದರೇ ಸಾಹಿತಿ ಆಗುತ್ತಿರಲಿಲ್ಲ. ಓದುಗರ ಪ್ರೀತಿಗಳಿಸಿದ್ದೇನೆ. ಓದಿಗಿಂತ ನನ್ನಲ್ಲಿ ಜೀವನಾನುಭವವಿದೆ. ಯಾರಿಗೂ ಹೆದರಿ ಬರವಣಿಗೆ ನಿಲ್ಲಿಸುವ ಜಾಯಮಾನ ನನ್ನದಲ್ಲ ಎಂದರು.

ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಬರಹದ ಮೂಲಕ ಕಸುವು ತುಂಬಿದ ವೇಣು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಈ ಹೊತ್ತಿಗೆ ಲಭಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಕಸಾಪ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಭೋವಿ ಸಮುದಾಯದ ಮುಖಂಡ ಆರ್.ಸತ್ಯಣ್ಣ, ವಿವಿಧ ಸಂಘಟನೆ ಮುಖಂಡರಾದ ಆನಂದಕುಮಾರ್, ಡಾ.ಎನ್.ಎಸ್.ಮಹಾಂತೇಶ್ ಮಾತನಾಡಿದರು. ಡಿ.ಗೋಪಾಲಸ್ವಾಮಿ ನಾಯಕ, ಗಂಗಾಧರನಾಯ್ಕ, ಚನ್ನಬಸಪ್ಪ, ಮಂಜುನಾಥ ಗುಪ್ತ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *