More

    ಇಂಗಳದಾಳ್‌ನಲ್ಲಿ ರಾಶಿ ಹಬ್ಬ

    ಚಿತ್ರದುರ್ಗ: ತಾಲೂಕಿನ ಇಂಗಳದಾಳ್ ಗ್ರಾಮದಲ್ಲಿ ಬುಧವಾರ ಮಾರಿಕಾಂಬ ದೇವಿ ರಾಶಿ ಹಬ್ಬ ಸಡಗರದಿಂದ ನೇರವೇರಿತು.

    ಗ್ರಾಮದಲ್ಲಿ ಪ್ರತಿ 3 ವರ್ಷಗಳಿಗೆ ಒಮ್ಮೆ ಜರುಗುವ ಜಾತ್ರೆಯ ಮೊದಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದಕ್ಕಾಗಿ ಪ್ರತಿ ಮನೆಯಲ್ಲಿ ಹೊಸ ಮಡಕೆ, ಬಿದಿರು ಬುಟ್ಟಿ ಸಿದ್ಧಪಡಿಸುತ್ತಾರೆ.

    ಅನ್ನ, ಮುದ್ದೆ, ಸಜ್ಜೆಯನ್ನು ಮಡಕೆಗಳಲ್ಲಿ ಮಧ್ಯಾಹ್ನ ವೇಳೆಗೆ ತುಂಬಿ ಅದರ ಸುತ್ತ ಚಿತ್ರಗಳನ್ನು ಬರೆದು ಉಪವಾಸವಾದೊಂದಿಗೆ, ಮಡಕೆ ಬಾನ ಹೊತ್ತು ಗ್ರಾಮ ದೇವತೆ ಮಾರಮ್ಮ ದೇವಾಲಯದಲ್ಲಿ ಒಂದೆಡೆ ರಾಶಿ ಹಾಕಲಾಗುತ್ತದೆ. ಬಳಿಕೆ ಗ್ರಾಮ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ರಾಶಿ ಪೂಜೆ ನಡೆಸಿ, ಪ್ರಸಾದ ಸ್ವೀಕರಿಸುತ್ತಾರೆ. ಈ ವೇಳೆ ಕೋಲಾಟ, ದೇವರ ಹಾಡುಗಳು ಹಾಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts