ಸರ್ವರೋಗಕ್ಕೆ ಯೋಗ ಮದ್ದು

ಚಿತ್ರದುರ್ಗ: ಯೋಗ ರತ್ನ ಪುರಸ್ಕೃತ ವಾರಣಾಸಿಯ ಶಿವಾನಂದ ಬಾಬಾಜಿ ಭಾನುವಾರ ನಗರದ ಕಬೀರಾನಂದಾಶ್ರಮಕ್ಕೆ ಭೇಟಿ ನೀಡಿ ಕೆಲ ಸಮಯ ಶ್ರೀಗಳ ಜತೆ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿ, ಬಾಲ್ಯದಿಂದ ಯೋಗಾಭ್ಯಾಸ ಮಾಡಿದ್ದರ ಫಲವಾಗಿ ಇಳಿ ವಯಸ್ಸಿನಲ್ಲೂ ಯಾರ ಸಹಾಯವೂ ಇಲ್ಲದೆ ನಡೆದಾಡುತ್ತಿದ್ದೇನೆ. ಸರ್ವರೋಗ ನಿವಾರಿಸುವ ಶಕ್ತಿ ಯೋಗಕ್ಕಿದೆ. ಕಾಯಿಲೆ ಬಂದಾಗ ವೈದ್ಯರ ಬಳಿ ಹೋಗುವ ಬದಲು ಯೋಗ ರೂಢಿಸಿಕೊಂಡರೆ ಯಾವುದೇ ಸಮಸ್ಯೆ ಹತ್ತಿರ ಸುಳಿಯುವುದಿಲ್ಲ ಎಂದರು.

ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಯೋಗದಿಂದ ಮನುಷ್ಯನ ಆರೋಗ್ಯ ವೃದ್ಧಿಸುತ್ತದೆ ಎಂಬುದಕ್ಕೆ ಶಿವಾನಂದ ಬಾಬಾಜಿ ನಿದರ್ಶನವಾಗಿದ್ದಾರೆ ಎಂದು ಹೇಳಿದರು.

ರೂಪಾ ಜನಾರ್ಧನ್, ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ನಿರಂಜನಮೂರ್ತಿ, ವಿ.ಎಲ್.ಪ್ರಶಾಂತ್ ಇತರರಿದ್ದರು.

Leave a Reply

Your email address will not be published. Required fields are marked *