More

  ನಾಟಕ ಸಪ್ತಾಹಕ್ಕೆ ನಾಳೆ ಚಾಲನೆ

  ಚಿತ್ರದುರ್ಗ: ಜಿಲ್ಲೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ಜ.4ರಿಂದ 10ರ ವರೆಗೆ ನಾಟಕ ಸಪ್ತಾಹವನ್ನು ಆಯೋಜಿಸಿದೆ.

  ಜಿಲ್ಲೆಯ ಕಲಾವಿದರ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಒದಗಿಸುವುದು, ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಉದ್ದೇಶದೊಂದಿಗೆ ಈ ಸಪ್ತಾ ಹ ನಡೆಯಲಿದೆ.

  ಸಾಮಾಜಿಕ, ಪೌರಾಣಿಕ ಜತೆಗೆ ಐತಿಹಾಸಿಕ ನಾಟಕಗಳ ಪ್ರದರ್ಶನವಿದ್ದು, ಪೊಲೀಸ್ ಇಲಾಖೆ ಹಾಗೂ ವಕೀಲರ ಸಂಘ, ಸಾಣೇಹಳ್ಳಿ ಶಿವಸಂಚಾರ ತಂಡ, ವಿವಿಧ ಜಿಲ್ಲೆಗಳ ರಂಗಸಮೂಹದ ವಿದ್ಯಾರ್ಥಿಗಳು, ರಂಗ ಸಂಚಾರಿ ಘಟಕದವರು ನಾಟಕಗಳಲ್ಲಿ ಅಭಿನಯಿಸಲಿದ್ದಾರೆ.

  4, 5, 8, 9 ಮತ್ತು 10ರಂದು ಸಂಜೆ 6ಕ್ಕೆ ತ.ರಾ.ಸು.ರಂಗಮಂದಿರ ಹಾಗೂ 6 ಮತ್ತು 7ರಂದು ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts