ಚಿತ್ರದುರ್ಗ ಹರಿದಾಸ ಹಬ್ಬದಲ್ಲಿ ಪ್ರವಚನಕ್ಕೆ ಶ್ರೀಕಾರ

ಚಿತ್ರದುರ್ಗ: ಸ್ವಾರ್ಥವಿಲ್ಲದೆ ಪ್ರೀತಿಯಿಂದ ದೇವರನ್ನು ಪೂಜಿಸಿದಾಗ ಮಾತ್ರ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಸೋಸಲೆ ಶ್ರೀ ವ್ಯಾಸರಾಜ ಮಠದ ವಿದ್ವಾನ್ ಎಲ್.ಸಿ.ಬ್ರಹ್ಮಣ್ಯತೀರ್ಥಾಚಾರ್ಯರು ಹೇಳಿದರು.

ನಗರದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಹರಿದಾಸ ಹಬ್ಬದ ಅಂಗವಾಗಿ ಶ್ರೀಮದ್ ಭಾಗವತ ‘ಶ್ರೀಕೃಷ್ಣ ವೈಭವ’ ಕುರಿತು ಪ್ರವಚನ ನೀಡಿದರು.

ಜಗತ್ತಿನಲ್ಲಿ ಧರ್ಮ ದೇವರು ಬಿಟ್ಟರೆ ಯಾವುದು ಶ್ರೇಷ್ಠವಲ್ಲ. ಆದ್ದರಿಂದ ಕೊನೆಯುಸಿರುವ ತನಕ ದೇವರನ್ನು ಹುಡುಕುವವನು ಮಾತ್ರ ಭಗವಂತನ ಪ್ರೀತಿಗೆ ಪಾತ್ರನಾಗುತ್ತಾನೆ ಎಂದರು.

ಭಕ್ತರ ಇಚ್ಛೆಗೆ ಅನುಗುಣವಾಗಿ ದೇವರು ಬರುತ್ತಾನೆ. ಅದಕ್ಕಾಗಿ ವಿವಿಧ ರೂಪದಲ್ಲಿ ಧರೆಗಿಳಿಯುತ್ತಾನೆ ಹೊರತು ಕರ್ಮ ಲದಿಂದಲ್ಲ. ನಮ್ಮಿಷ್ಟ ಬಂದಂತೆ ಭಾವಿಸಿಕೊಂಡರೆ ಆಗುವುದಿಲ್ಲ. ಎಲ್ಲದಕ್ಕೂ ಶಿಸ್ತು ಇದ್ದಾಗ ಮಾತ್ರ ಲ ಸಾಧ್ಯ ಎಂದು ಹೇಳಿದರು.

ಹೆಚ್ಚಿನ ವಿವರಕ್ಕೆ ವಿಜಯವಾಣಿ ಓದಿ