ನೌಕರ ಸಂಘದ ಅಧ್ಯಕ್ಷರ ಆಯ್ಕೆ

ಚಿತ್ರದುರ್ಗ: ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಕೆ.ಜಿ.ಜಗದೀಶ್ ಗುಂಪು ಜಯಭೇರಿ ಬಾರಿಸಿದೆ.

ಅಧ್ಯಕ್ಷರಾಗಿ ಜಯ ಸಾಧಿಸಿರುವ ಜಗದೀಶ್‌ಗೆ 37 ಹಾಗೂ ಪರಾಜಿತ ಪ್ರತಿಸ್ಪರ್ಧಿ ಕೆ.ಮಂಜುನಾಥ್‌ಗೆ 29 ಮತಗಳ ಲಭಿಸಿವೆ.

ರಾಜ್ಯಪರಿಷತ್‌ಗೆ ಸದಸ್ಯರಾಗಿರುವ ಕೆ.ಟಿ.ತಿಮ್ಮಾರೆಡ್ಡಿ 43 ಹಾಗೂ ಖಜಾಂಜಿಯಾಗಿರುವ ಬಿ.ವಿರೇಶ್ 37 ಮತಗಳನ್ನು ಪಡೆದಿದ್ದಾರೆ. ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆ.ರಾಘವೇಂದ್ರ 23 ಹಾಗೂ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರದೀಪ್ ಕುಮಾರ್ 29 ಮತಗಳನ್ನು ಪಡೆದು ಪರಾಜಿತರಾಗಿದ್ದಾರೆ.

ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಜಗದೀಶ್ ನೇತೃತ್ವದಲ್ಲಿ ನೂರಾರು ಸರ್ಕಾರಿ ನೌಕರರು ವಿಜಯೋತ್ಸವ ಆಚರಿಸಿದರು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಈಗಾಗಲೇ ಮೂರು ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದ ಜಗದೀಶ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

Leave a Reply

Your email address will not be published. Required fields are marked *