ಜಲಸಂರಕ್ಷಣೆ ಜಾಗೃತಿ ಜಾಥಾ

ಚಿತ್ರದುರ್ಗ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಸೋಮವಾರ ನಗರದ ಒನಕೆ ಒಬವ್ವ ವೃತ್ತದಲ್ಲಿ ಜಲ ಮೂಲ ಸಂರಕ್ಷಣೆ ಜಾಗೃತಿ ಜಾಥಾ ನಡೆಸಿದರು.

ಗಿಡ-ಮರ ಕಡಿದು ಪರಿಸರ ನಾಶಪಡಿಸುತ್ತಿರುವುದರಿಂದ ಸಕಾಲಕ್ಕೆ ಮಳೆಯಾಗದೆ ಜೀವ ರಾಶಿಗಳು ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಜಲಮೂಲ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ವಿದ್ಯಾರ್ಥಿಗಳು ಸಾರಿದರು.

ಪರಿಸರ ತಜ್ಞ ಡಾ.ಎಚ್.ಎಸ್.ಕೆ.ಸ್ವಾಮಿ, ಪ್ರಾಧ್ಯಾಪಕ ಕೆ.ಕೆ.ಕಮಾನಿ, ಲೇಖಕ ಆನಂದಕುಮಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *