ಚಿತ್ರದುರ್ಗದಲ್ಲಿ ಗಮಕ ಅಧ್ಯಯನ ಶಿಬಿರ ಆರಂಭ

ಚಿತ್ರದುರ್ಗ: ಜಿಲ್ಲೆ ಭೌಗೋಳಿಕವಾಗಿ ಬರಪೀಡಿತವಾದರೂ ಕಲೆಗಳ ವಿಷಯದಲ್ಲಿ ಶ್ರೀಮಂತವಾಗಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಬಣ್ಣಿಸಿದರು.

ನಗರದ ಶಾರದಾ ಸಭಾಭವನದಲ್ಲಿ ಶುಕ್ರವಾರ ಸಂಗೀತ ನೃತ್ಯ ಅಕಾಡೆಮಿ ಆಯೋಜಿಸಿದ್ದ ಗಮಕ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಸ್ಕೃತಿಯಲ್ಲಿ ಭಾರತೀಯ ಕಲೆಗಳ ಪಾತ್ರ ಬಹು ಮಹತ್ವದ್ದು. ಯುವ ಪೀಳಿಗೆಯಲ್ಲಿ ಗಮಕ ಕಲೆಯ ಬಗ್ಗೆ ಆಸಕ್ತಿ ಮೂಡಿಸಬೇಕಿದೆ. ನಮ್ಮ ಹಿರಿಯರು ನೀಡಿದ ಕಲೆಯನ್ನು ಮುಂದಿನ ತಲೆಮಾರಿಗೆ ಸಮರ್ಥವಾಗಿ ವರ್ಗಾಯಿಸಬೇಕಿದೆ ಎಂದು ಹೇಳಿದರು.

ಅಕಾಡೆಮಿಯ ರಿಜಿಸ್ಟ್ರಾರ್ ಅಶೋಕ ಚಲವಾದಿ ಮಾತನಾಡಿ, ಆಸಕ್ತರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ರಾಜ್ಯಾದ್ಯಂತ ಶಿಬಿರ ನಡೆಸಿ, ವಿವಿಧ ಸಂಗೀತ ಪ್ರಕಾರಗಳ ತರಬೇತಿ ನೀಡಲಾಗುತ್ತಿದೆ ಎಂದರು.

ಹಿರಿಯ ಗಮಕಿ ನಿರ್ಮಲಾ ಪ್ರಸನ್ನ ಮಾತನಾಡಿದರು. ಹಿರಿಯ ಗಮಕಿ ಮತ್ತೂರು ರಾಮಮೂರ್ತಿ, ಶಿಬಿರದ ಸಂಚಾಲಕ ಕೆ. ರಾಜೀವಲೋಚನ ಇತರರಿದ್ದರು.

ಹೆಚ್ಚಿನ ವಿವರಕ್ಕೆ ವಿಜಯವಾಣಿ ಓದಿ

Leave a Reply

Your email address will not be published. Required fields are marked *