More

    ತೋಟಗಾರಿಕೆ ಇಲಾಖೆಯಿಂದ ಚಂದ್ರಯಾನ -3ರ ‘ಸಾಹಸ’!

    ಚಿತ್ರದುರ್ಗ: ಈ ಬಾರಿಯ ಫಲ, ಪುಷ್ಪ ಪ್ರದರ್ಶನದಲ್ಲಿ ಚಂದ್ರಯಾನ-3 ಸಾಹಸಕ್ಕೆ ತೋಟಗಾರಿಕೆ ಇಲಾಖೆ ಸಜ್ಜಾಗಿದೆ!

    ಹೌದು, ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಜ.31 ರಿಂದ ಫೆ.2 ರವರೆಗೆ ನಡೆಯುವ 29 ನೇ ಫಲ ಪುಷ್ಪ ಪ್ರದರ್ಶನ ದಲ್ಲಿ ದೇಶದ ಹೆಮ್ಮೆ ಇಸ್ರೋದ ಚಂದ್ರಯಾನ ಸಾಹಸ ಕುರಿತಂತೆ ನೋಡುಗರಲ್ಲಿ ಜಾಗೃತಿ ಮೂಡಿಸಲು ಇಲಾಖೆ ಮುಂದಾಗಿದೆ.

    ಚಂದ್ರಯಾನ-3 ಈ ಬಾರಿ ಮಿಸ್ ಆಗುವ ಚಾನ್ಸೇ ಇಲ್ಲವೆಂದು ನಾಸಾ ವಿಜ್ಞಾನಿಗಳಿಗೆ ಆಲ್‌ದಿ ಬೆಸ್ಟ್ ಕೋರುವ ಮೂಲಕ ಈ ಪ್ರದರ್ಶನಕ್ಕೆ ಸೈಂಟಿಫಿಕ್ ಟಚ್‌ಗೆ ಸಿದ್ಧತೆ ನಡೆದಿದೆ.

    ಪ್ರದರ್ಶನ ಕುರಿತು ಜಿಪಂ ಸಿಇಒ ಸಿ.ಸತ್ಯಭಾಮಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು, ಚಂದ್ರಯಾನ-3 ಈ ಬಾರಿಯ ಪ್ರಮುಖ ಆಕರ್ಷಣೆಯಾಗಲಿದೆ. ಒಂಟಿಕಲ್ಲು ಬಸವಣ್ಣ, ಒನಕೆ ಓಬವ್ವ ಕಲಾಕೃತಿ, ತರಾಸು ಕಲಾಕೃತಿಯೊಂದಿಗೆ ಈ ಬಾರಿ ಮಕ್ಕಳ ವಿಭಾಗವೂ ಆಕರ್ಷಿಸಲಿದೆ.

    ಈ ವಿಭಾಗದಲ್ಲಿ ನಡೆದಾಡುವ ಡೈನೋಸಾರಸ್, ಕಾರ್ಟೂನ್ ಇತ್ಯಾದಿ ಕಲಾಕೃತಿಗಳನ್ನು ಅಣಿಗೊಳಿಸಲಾಗಿದೆ. ತೋಟಗಾರಿಕೆ ಕ್ಷೇತ್ರದ ಒಂದು ಮಾದರಿ ನಿರ್ಮಿಸಿ ವಿವಿಧ ಬಹುಬೆಳೆ ಪದ್ಧತಿ ಬಗ್ಗೆ ಹಾಗೂ ನೀರಿನ ಮಿತ ಬಳಕೆ, ಔಷಧ ಗಿಡಗಳು, ನೂರಕ್ಕೂ ಹೆಚ್ಚು ವೈವಿಧ್ಯ ತಳಿಗಳಿಂದ ಕೂಡಿರುವ ಹೂವು ಹಾಗೂ ಆರ್ಕಿಡ್‌ಗಳಿರುತ್ತವೆ. ಪ್ರದರ್ಶನದ ಅಂಗವಾಗಿ ಜ.30 ರಿಂದಲೇ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

    31 ರಂದು ಸಂಜೆ 6 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಪ್ರದರ್ಶನ ಉದ್ಘಾಟಿಸುವರು. ಶಾಸಕರು, ಸಂಸದರು, ಜಿಪಂ ಸದಸ್ಯರು ಹಾಗೂ ಅಧಿಕಾರಿಗಳಿರುತ್ತಾರೆ ಎಂದರು.

    ತೋಟಗಾರಿಕೆ ಉಪನಿರ್ದೇಶಕಿ ಜಿ.ಸವಿತಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ದೇವರಾಜು, ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಎ.ಎಸ್. ಲೋಕನಾಥ್ ಹಾಗೂ ಎಂ.ವಿ.ವೀಣಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts