ಚಿತ್ರದುರ್ಗ: ಸಿಎಂ ಬಿ.ಎಸ್.ಯಡಿಯೂರಪ್ಪರ ಮೂಲೆಗುಂಪಿಗೆ ಸಂಚು ಬಿಜೆಪಿಯಲ್ಲಿ ನಡೆದಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಶಂಕಿಸಿದರು.
2011ರಲ್ಲಿ ಯಡಿಯೂರಪ್ಪ ವಿರುದ್ಧ ಯಾವ ಶಕ್ತಿಗಳು ಕೆಲಸ ಮಾಡಿದ್ದವೊ ಅವೇ ಶಕ್ತಿಗಳು ಇಂದು ಅವರನ್ನು ನಿಷ್ಕ್ರಿಯಗೊಳಿಸಲು ಮುಂದಾಗಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತುಮಕೂರಲ್ಲಿ ಸಿಎಂ ಕೋರಿಕೆಗೆ ಪ್ರಧಾನಿ ಸ್ಪಂದಿಸಲಿಲ್ಲ. ಆದ್ದರಿಂದ ನಿಷ್ಕ್ರಿಯ ಮುಖ್ಯಮಂತ್ರಿ ಎಂಬ ಹೆಸರು ಪಡೆಯುವ ಮೊದಲು ಹೈಕಮಾಂಡ್ ವಿರುದ್ಧ ಸಿಡಿದು ರಾಜ್ಯದ ಅಭಿವೃದ್ಧಿಗೆ ಮುಂದಾಗುವಂತೆ ಯಡಿಯೂರಪ್ಪರನ್ನು ಒತ್ತಾಯಿಸಿದರು.
ಸಿಎಎ ಜಾರಿ ಮಾಡಿದ್ದು ಸರಿ ಅಥವಾ ತಪ್ಪೇ ಎನ್ನುವುದು ಜನತಾ ನ್ಯಾಯಾಲಯದಲ್ಲಿ ತೀರ್ಮಾನಿಸಲು ಕೂಡಲೇ ಸಂಸತ್ ಅನ್ನು ವಿಸರ್ಜಿಸಿ ಪೇಪರ್ ಬ್ಯಾಲೇಟ್ ಮೂಲಕ ಚುನಾವಣೆ ಎದುರಿಸಲಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.