ದೇವರಾಜು ಅರಸು ಸಂಸ್ಥೆ ಮೈಲಿಗಲ್ಲು

ಚಿತ್ರದುರ್ಗ: ಪ್ರಥಮ ಪ್ರಯತ್ನದಲ್ಲೇ ಪಿಯು ಸಿಬಿಎಸ್‌ಇಯಲ್ಲಿ ನೂರರ ಸಾಧನೆ ಮಾಡಿದ ನಗರದ ದೇವರಾಜು ಅರಸು ಶಿಕ್ಷಣ ಸಂಸ್ಥೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

2018-19ನೇ ಸಾಲಿನ +2 ಫಲಿತಾಂಶದಲ್ಲಿ ಇಂಡಿಯನ್ ಇಂಟರ್ ನ್ಯಾಷನಲ್ ಸಿಬಿಎಸ್‌ಇ ಶಾಲೆ 30 ಡಿಸ್ಟಿಂಕ್ಷನ್, 5 ಪ್ರಥಮ ಶ್ರೇಣಿಗಳಿಸಿತ್ತು. ಆದೇ ಬೆನ್ನಲ್ಲೇ ಬುಧವಾರ ಹೊರಬಿದ್ದ ನೀಟ್ ಫಲಿತಾಂಶದಲ್ಲಿ ಆಲ್ ಇಂಡಿಯಾ 3815ನೇ ರ‌್ಯಾಂಕ್ ಗಳಿಸಿದೆ.

ಪಿಯುನಲ್ಲಿ ಶೇ.84 ಅಂಕ ಗಳಿಸಿದ್ದ ಗಂಗಮ್ಮ 3815ನೇ ರ‌್ಯಾಂಕ್ ಗಳಿಸಿದ್ದಾಳೆ. ಪರೀಕ್ಷೆ ಬರೆದ 15 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ದೇವರಾಜು ಅರಸು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಎಂ.ಚಂದ್ರಪ್ಪ ತಿಳಿಸಿದ್ದಾರೆ.

Leave a Reply

Your email address will not be published. Required fields are marked *