More

    ಚಲನಚಿತ್ರಗಳಲ್ಲಿ ದುರ್ಗದ ಛಾಯಾಗ್ರಾಹಕರದ್ದೇ ಕಾರುಬಾರು

    ಚಿತ್ರದುರ್ಗ: ಚಲನಚಿತ್ರದ ಪ್ರಾರಂಭದ ದಿನಗಳಲ್ಲಿ ನುರಿತ ಛಾಯಾಗ್ರಾಹಕರ ಆಯ್ಕೆ ಬಹು ಕಠಿಣವಾಗಿತ್ತು. ಆದರೆ ಅಂದಿನ ಸಂದರ್ಭದಲ್ಲೂ ಚಿತ್ರದುರ್ಗದಲ್ಲಿ ಉತ್ತಮ ಛಾಯಾಗ್ರಾಹಕರಿದ್ದರೆಂದು ಮೈಸೂರಿನ ವನ್ಯಜೀವಿ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ಹೇಳಿದರು.

    ಚಿತ್ರದುರ್ಗ ತಾಲೂಕು ಪೋಟೊ ಮತ್ತು ವೀಡಿಯೊಗ್ರಾಫರ್ಸ್‌ ವೆಲ್ಫೇರ್ ಅಸೋಸಿಯೇಷನ್ ಭಾನುವಾರ ನಗರದ ಬಂಜಾರ ಸಮು ದಾಯ ಭವನದಲ್ಲಿ ಏರ್ಪಡಿಸಿದ್ದ ಛಾಯಾ ಸಂಭ್ರಮ-2020ನ್ನು ಉದ್ಘಾಟಿಸಿ ಮಾತನಾಡಿದರು.

    ಇಲ್ಲಿ ಉತ್ತಮ ಛಾಯಾಗ್ರಾಹಕರು ಇರಲು ಕಾರಣ, ಜಿಲ್ಲೆ ಜನರಲ್ಲಿ ಕಲಾ ಪ್ರಜ್ಞೆ. ಇಂದಿಗೂ ಚಲನಚಿತ್ರಗಳಲ್ಲಿ ಈ ಜಿಲ್ಲೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲು ಇಲ್ಲಿ ಕೆಲವೇ ಕೆಲವು ಫೋಟೊ ಸ್ಟುಡಿಯೊಗಳಿದ್ದು, ಪಾಸ್ ಪೋರ್ಟ್ ಫೋಟೊಗೆ ಒಂದು ವಾರ ಕಾಯಬೇಕಿತ್ತು. ಆದರೆ ಈಗ ಮೊಬೈಲ್ಗಳಿಂದಾಗಿ ಅನೇಕರಿಗೆ ಹೆಚ್ಚಿನ ಕೆಲಸ ಇಲ್ಲದಂತಾಗಿದ್ದು, ಕಲಾತ್ಮಕತೆ ವೃತ್ತಿಯನ್ನು ಕಾಪಾಡುತ್ತದೆ. ವನ್ಯಜೀವಿ ಛಾಯಾಗ್ರಾಹಕನಾಗಿ ಕೆಲಸ ಮಾಡುವುದು ಒಂದು ಸಾಧನೆ. ಒಂದು ಸುಂದರ ಚಿತ್ರ ಸೆರೆಹಿಡಿಯಲು ಹಲವು ದಿನಗಳೇ ಬೇಕು ಎಂದರು.

    ಇದೇ ವೇಳೆ ಕರ್ನಾಟಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪರಮೇಶ್, ಡಿಜಿ ಇಮೇಜ್ ಎಕ್ಸಿಬಿಷನ್ ಉದ್ಘಾಟಿಸಿ ಮಾತನಾಡಿ, ಬೆಂಗಳೂರಲ್ಲಿ ಜೂನ್ 26 ರಿಂದ ಮೂರು ದಿನಗಳ ಕಾಲ ರಾಜ್ಯಮಟ್ಟದಲ್ಲಿ ಡಿಜಿ ಇಮೇಜ್ ಎಕ್ಸಿಬಿಷನ್ ನಡೆಯಲಿದೆ. ವೃತ್ತಿ ಬಾಂಧವರು ಸಂಘಟನೆ ಮೂಲಕ ಆಧುನಿಕ ತಂತ್ರಜ್ಞಾನ ಅರಿವಿಗೆ ಒತ್ತು ಕೊಡಬೇಕೆಂದು ಸಲಹೆ ನೀಡಿದರು.

    ಸಂಘದ ತಾಲೂಕು ಅಧ್ಯಕ್ಷ ಮಹಂತೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯಕಾರ್ಯದರ್ಶಿ ಎ.ಎಂ.ಮುರುಳಿ, ಕೆ.ಎನ್.ತಿಪ್ಪೇಸ್ವಾಮಿ, ಅಂಚೆ ವಿಭಾಗೀಯ ಅಧೀಕ್ಷಕ ಶಿವರಾಜ್ ಖಿಂಡೆಮಠ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts