ರಾತ್ರಿ ಊಟ ಮುಗಿಸಿ ಮಲಗಿದ್ದ ಒಂದೇ ಕುಟುಂಬದ ಮೂವರು ಸಾವು, ನಾಲ್ವರು ಅಸ್ವಸ್ಥ

ಚಿತ್ರದುರ್ಗ: ಗುರುವಾರ ರಾತ್ರಿ ಊಟ ಸೇವಿಸಿ ಮಲಗಿದ್ದ ಒಂದೇ ಕುಟುಂಬದ ಏಳು ಮಂದಿಯಲ್ಲಿ ಮೂವರು ಸಾವಿಗೀಡಾಗಿ ನಾಲ್ವರು ಅಸ್ವಸ್ಥಗೊಂಡಿರುವ ಘಟನೆ ಹಿರಿಯೂರು ತಾಲೂಕಿನ ಹುಲಿತೊಟ್ಟಿಲು ಗ್ರಾಮದಲ್ಲಿ ನಡೆದಿದೆ.

ಶಶಿಧರ(50), ಚಿತ್ತಯ್ಯ(80) ಹಾಗೂ ಭಾಗ್ಯಮ್ಮ(35) ಮೃತ ದುರ್ದೈವಿಗಳು. ಸದಾನಂದ(13), ಮುದ್ದುರಾಜ್(14), ಹೇಮಲತಾ(30) ಹಾಗೂ ಅಜಯ್ಯ(14) ಎಂಬವರು ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ಊಟ ಮುಗಿಸಿ ಮಲಗಿದ್ದರು ಬೆಳಗಾಗುವಷ್ಟರಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಐಮಂಗಲ ಪಿಎಸ್ಐ ಎಚ್. ಲಿಂಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)