ಸಾಧಕಿಗೆ ಶಾಸಕ ಚಂದ್ರಪ್ಪ ಸನ್ಮಾನ

ಚಿತ್ರದುರ್ಗ: ನೀಟ್ ಫಲಿತಾಂಶದಲ್ಲಿ ಆಲ್ ಇಂಡಿಯಾ 3815ನೇ ರ‌್ಯಾಂಕ್ ಗಳಿಸಿದ ಇಂಡಿಯನ್ ಇಂಟರ್ ನ್ಯಾಷನಲ್ ಸಿಬಿಎಸ್‌ಇ ವಿದ್ಯಾರ್ಥಿನಿ ಗಂಗಮ್ಮ ಅವರನ್ನು ದೇವರಾಜು ಅರಸು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ, ಶಾಸಕ ಎಂ.ಚಂದ್ರಪ್ಪ ಬುಧವಾರ ಸನ್ಮಾನಿಸಿದರು.

ಬಳಿಕ ಮಾತನಾಡಿ, ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ನೀಟ್ ಪರೀಕ್ಷೆಯಲ್ಲಿ ಸಂಸ್ಥೆ ಅಪೂರ್ವ ಸಾಧನೆ ಮಾಡಿದೆ. ವಿದ್ಯಾರ್ಥಿನಿ ಗಂಗಮ್ಮ 3,815 ಹಾಗೂ ಚಂದನಾ 5987ನೇ ರ‌್ಯಾಂಕ್ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.

26 ವಿದ್ಯಾರ್ಥಿಗಳು 380ಕ್ಕಿಂತ ಹೆಚ್ಚು ಅಂಕ ಗಳಿಸಿ ವೈದ್ಯಕೀಯ ಕೋರ್ಸ್ ಪ್ರವೇಶದ ಹಾದಿಯಲ್ಲಿದ್ದಾರೆ. ಗುಣಮಟ್ಟದ ಶಿಕ್ಷಣ, ಪರೀಕ್ಷಾ ಪೂರ್ವತಯಾರಿ, ವಿದ್ಯಾರ್ಥಿಗಳ ಶ್ರಮ, ಪಾಲಕರ ಬೆಂಬಲದಿಂದ ಸಾಧನೆ ಸಾಧ್ಯವಾಗಿದೆ ಎಂದರು.

ಆಡಳಿತಾಧಿಕಾರಿ ಚಂದ್ರಕಲಾ, ಸಿಇಒ ರಘುಚಂದನ್ ಇದ್ದರು.

Leave a Reply

Your email address will not be published. Required fields are marked *