ಭವಿಷ್ಯದಲ್ಲಿ ಪ್ಲಾಸ್ಟಿಕ್ ಮಳೆ ಸಾಧ್ಯತೆ: ಉಪನ್ಯಾಸಕ ಕಮಾನಿ ಆತಂಕ

ಚಿತ್ರದುರ್ಗ: ನಗರದ ಲಿಟ್ಸ್ ಕಿಡ್ಸ್ ಬೇಬೀಸ್ ಬ್ರೆತ್ ಎಜುಕೇಷನ್ ಟ್ರಸ್ಟ್‌ನಲ್ಲಿ ಬುಧವಾರ ಪರಿಸರ ಉಳಿಸಿ ಜಾಥಾ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಯಿತು.

ಸರ್ಕಾರಿ ವಿಜ್ಞಾನ ಕಾಲೇಜು ಉಪನ್ಯಾಸಕ ಡಾ.ಕೆ.ಕೆ.ಕಮಾನಿ ಮಾತನಾಡಿ, ವಾತಾವರಣದಲ್ಲಿ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ತೇಲಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಪ್ಲಾಸ್ಟಿಕ್ ಮಳೆ ಬರುವ ಸಾಧ್ಯತೆಗಳಿವ. ಆದ್ದರಿಂದ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಎಂದು ಹೇಳಿದರು.

ಜಾಥಾ ಉದ್ಘಾಟಿಸಿ ಮಾತನಾಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ್, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಿದರೆ ಭವಿಷ್ಯದಲ್ಲಿ ಫಲಿತಾಂಶ ಸಿಗುತ್ತದೆ ಎಂದರು.

ಚಿತ್ರಕಲಾ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಸ್ಪರ್ಧೆಯ 3-6 ವರ್ಷದೊಳಗಿನ ವಿಭಾಗದಲ್ಲಿ ಹಾರ್ಥಿಕ್ (ಪ್ರ), ಜಿ.ಹಾಸಿನಿ (ದ್ವಿ), 7-12 ವರ್ಷದೊಳಗಿನ ವಿಭಾಗ ಕ್ರಿಶ್.ಡಿ.ಜೈನ್ (ಪ್ರ), ಪಿ.ಜಿ.ಶ್ರೇಯಸ್ (ದ್ವಿ) ಸ್ಥಾನ ಗಳಿಸಿದ್ದಾರೆ.

ಎಸ್‌ಜೆಎಂ ಚಿತ್ರಕಲಾ ಕಾಲೇಜು ಪ್ರಾಂಶುಪಾಲ ಕಣ್ಮೇಶ್, ನಿವೃತ್ತ ಡಿವೈಎಸ್ಪಿ ಅಬ್ದುಲ್ ರೆಹಮಾನ್, ಪರಿಸರವಾದಿ ಡಾ.ಎಚ್.ಕೆ.ಎಸ್.ಸ್ವಾಮಿ, ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಎಂ.ಬಿ. ಚಂದ್ರಶೇಖರ್, ಡಿ.ಸಿ.ಮನು, ಕೆ.ಎಸ್.ಆಶಾ, ಕೆ.ಬಿ.ಶಶಿಧರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *