ನೇರ ರೈಲು ಮಾರ್ಗ ಆಗಲಿದೆ

ಚಿತ್ರದುರ್ಗ: ದಾವಣಗೆರೆ-ತುಮಕೂರು ರೈಲ್ವೆ ಮಾರ್ಗದ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ನಗರದ ಮಾದಾರ ಚನ್ನಯ್ಯ ಮಠಕ್ಕೆ ಬುಧವಾರ ಸಂಜೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕದವರೇ ಆದ ಸುರೇಶ್ ಅಂಗಡಿ ರೈಲ್ವೇ ಸಚಿವರಾಗಿದ್ದಾರೆ. ನೇರ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಹೊಣೆಗಾರಿಕೆ ಏನೂ ಇಲ್ಲ. ಈಗ ಏನಿದ್ದರೂ ಚೆಂಡು ರಾಜ್ಯದ ಮುಂದಿದೆ. ಆದರೂ ರೈಲ್ವೆ ಸಚಿವರು, ಸಂಸದರಾದ ಎ.ನಾರಾಯಣಸ್ವಾಮಿ, ತುಮಕೂರಿನ ಬಸವರಾಜ್ ಅವರೊಂದಿಗೆ ಸೇರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಪ್ರಯತ್ನ ನಡೆಸಲಿದ್ದೇವೆ ಎಂದರು.

ಇದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಆಗಬೇಕಿದ್ದ ಭೂಸ್ವಾಧೀನಕ್ಕೆ ಅಧಿಸೂಚನೆ ಆಗಿದೆ ಎಂದ ಅವರು, ಚಿತ್ರದುರ್ಗ-ದಾವಣಗೆರೆ ರಸ್ತೆಯ ರೈಲ್ವೆ ಒವರ್ ಬ್ರಿಡ್ಜ್ ನಿರ್ಮಾಣ, ಜೆಎಂಐಟಿ ಸೇರಿ ಈ ಮಾರ್ಗದಲ್ಲಿ ರಾ.ಹೆ.ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

Leave a Reply

Your email address will not be published. Required fields are marked *