24 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ

ಚಿತ್ರದುರ್ಗ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಿಲ್ಲೆಯ 24 ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮ ಆರಂಭಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಶಾಲೆಗಳಲ್ಲಿ ಈಗಾಗಲೇ ಶಿಕ್ಷಕರು, ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಜಿಲ್ಲೆಯ 7 ಕೆಪಿಎಸ್ ಶಾಲೆಗಳಲ್ಲಿ ಎಲ್‌ಕೆಜಿ ಪ್ರಾರಂಭಿಸಲಾಗಿದೆ. ಹೊಸ ಪಠ್ಯ ಪುಸ್ತಕಗಳನ್ನು ಶೀಘ್ರ ಸರಬರಾಜು ಮಾಡಲಾಗುತ್ತದೆ. ಕೆಲ ಕಡೆ ಹೊಸ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಶಾಲೆಗಳ ವಿವರ: ಚಿತ್ರದುರ್ಗ ತಾಲೂಕಿನ ಜಂಪನಹಟ್ಟಿಯ ಕೆಪಿಎಸ್ ಶಾಲೆ, ಕುರುಬರಹಳ್ಳಿ ಹಿರಿಯ ಪ್ರಾ.ಶಾಲೆ, ಜಿ.ಆರ್.ಹಳ್ಳಿಯ ಮಾದರಿ ಹಿ.ಪ್ರಾ.ಶಾಲೆ, ಚಿತ್ರದುರ್ಗದ ವಿಪಿ ಬಡಾವಣೆ ಮಾದರಿ ಹಿ.ಪ್ರಾ.ಶಾಲೆ. ಚಳ್ಳಕೆರೆ ತಾಲೂಕಿನ ಗೋಸಿಕೆರೆ, ಕಾಮಸಮುದ್ರದ ಹಿರಿಯ ಪ್ರಾ.ಶಾಲೆ, ಚಳ್ಳಕೆರೆ ಬಾಲಕಿಯರ ಹಿ.ಪ್ರಾ.ಶಾಲೆ, ಪರಶುರಾಮಪುರ ಕೆ.ಪಿ.ಎಸ್ ಶಾಲೆ.

ಹೊಸದುರ್ಗ ತಾಲೂಕಿನ ದೇವಪುರ ಜೂನಿಯರ್ ಕಾಲೇಜು, ಶ್ರೀರಾಂಪುರ ಕೆಪಿಎಸ್ ಶಾಲೆ, ಹೊಸದುರ್ಗದ ಮಾದರಿ ಹಿ.ಪ್ರಾ.ಶಾಲೆ. ಹಿರಿಯೂರು ತಾಲೂಕಿನ ಮರಡಿಹಳ್ಳಿ, ಹೊಸಯಳನಾಡು ಕೆಪಿಎಸ್ ಶಾಲೆ, ಯರಬಳ್ಳಿ ಸರ್ಕಾರಿ ಜೂನಿಯರ್ ಕಾಲೇಜು, ಹಿರಿಯೂರು ಹಿರಿಯ ಪ್ರಾ.ಶಾಲೆ.

ಹೊಳಲ್ಕೆರೆ ತಾಲೂಕಿನ ತೆಲಕಲವಟ್ಟಿ, ರಾಮಗಿರಿಯ ಹಿ.ಪ್ರಾ.ಶಾಲೆ, ಕಾಶಿಪುರದ ಕೆಪಿಎಸ್ ಶಾಲೆ, ಹೊಳಲ್ಕೆರೆ ಎನ್‌ಇಎಸ್ ಕಾಲನಿ ಹಿ.ಪ್ರಾ.ಶಾಲೆ. ಮೊಳಕಾಲ್ಮೂರು ತಾಲೂಕಿನ ರಾಂಪುರ, ನಾಗಸಮುದ್ರ, ಮೊಳಕಾಲ್ಮೂರಿನ ಜೂನಿಯರ್ ಕಾಲೇಜು, ಬಿಜಿ ಕೆರೆಯ ಕೆಪಿಎಸ್ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *