More

    ನಾಳೆ ಸ್ಪರ್ಶ್ ಕುಷ್ಠರೋಗ ಸಮೀಕ್ಷೆಗೆ ಚಾಲನೆ

    ಚಿತ್ರದುರ್ಗ: ಕುಷ್ಠರೋಗವನ್ನು ಆರಂಭದಲ್ಲೇ ಪತ್ತೆ ಮಾಡಿದರೆ ಶೀಘ್ರ ಗುಣಪಡಿಸಲು ಸಾಧ್ಯ ಎಂದು ಡಿಸಿ ಆರ್.ವಿನೋತ್ ಪ್ರಿಯಾ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ರೋಗ ಕುರಿತ ನಾಗರಿಕ ಜಾಗೃತಿಗಾಗಿ ಜ.30ರಿಂದ ಫೆ.13ರ ವರೆಗೆ ಜಿಲ್ಲೆಯಲ್ಲಿ ಸ್ಪರ್ಶ್ ಕುಷ್ಠರೋಗ ಪತ್ತೆ ಸಮೀಕ್ಷೆ ಹಾಗೂ ಅರಿವು ಆಂದೋಲನ ಆಯೋಜಿಸಲಾಗಿದೆ ಎಂದರು.

    ಕಳೆದ ಅಕ್ಟೋಬರ್‌ನಲ್ಲಾದ ವಿಶೇಷ ಸಮೀಕ್ಷೆಯಲ್ಲಿ ಹೊಸದಾಗಿ ಒಟ್ಟು 32 ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 10 ಪ್ರಾರಂಭಿಕ, 22 ನಂತರದ ಹಂತದ್ದಾಗಿವೆ. ಈಗಾಗಲೆ ಇರುವ ಹಳೆಯ 45ರ ಸಹಿತ ಜಿಲ್ಲೆಯಲ್ಲಿ 77 ಕುಷ್ಠರೋಗ ಪ್ರಕರಣಗಳಿವೆ ಎಂದು ತಿಳಿಸಿದರು.

    ಕುಷ್ಠರೋಗ ಪತ್ತೆ ಕಾರ್ಯ ಗ್ರಾಮಗಳಲ್ಲಿ ಸಮರ್ಪಕವಾಗಿ ಆಗುತ್ತಿಲ್ಲ, ಆಶಾ ಕಾರ್ಯಕರ್ತೆಯರ ವೈಫಲ್ಯಕ್ಕೆ ಕಾರಣವೇನು? ತರಬೇತಿ ಕೊಟ್ಟಿರಲಿಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

    ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ ಕಂಬಾಳಿಮಠ ಪ್ರತಿಕ್ರಿಯಿಸಿ, ಕೆಲ ಪ್ರಕರಣಗಳಲ್ಲಿ ರೋಗ ಲಕ್ಷಣಗಳು ಬೇಗ ಕಂಡುಬರುವುದಿಲ್ಲ, ಆಶಾ ಕಾರ್ಯಕರ್ತೆಯರಿಗೆ ಮತ್ತೆ ತರಬೇತಿ ನೀಡುವುದಾಗಿ ತಿಳಿಸಿದರು.
    ಚಳ್ಳಕೆರೆ ತಾಲೂಕಿನಲ್ಲಿ ಹೆಚ್ಚು 26, ಚಿತ್ರದುರ್ಗ-19, ಹೊಳಲ್ಕೆರೆ-10, ಹಿರಿಯೂರು-7, ಹೊಸದುರ್ಗ-6, ಮೊಳಕಾಲ್ಮೂರು-9 ಪ್ರಕರಣಗಳಿವೆ ಎಂದರು.

    ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರೇಣುಪ್ರಸಾದ್, ರೋಗಶಾಸ್ತ್ರಜ್ಞ ಡಾ.ರುದ್ರೇಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್, ಶಿಕ್ಷಣ ಇಲಾಖೆ ಡಿವೈಪಿಸಿ ಸಿ.ಎಂ.ತಿಪ್ಪೇಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts