ಚಿತ್ರದುರ್ಗ: ಶೇ.100 ಪರಿಶುದ್ಧ ರೇಷ್ಮೆಯಿಂದ ತಯಾರಿಸಿರುವ ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆ ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದು ಡಿಸಿ ಆರ್.ವಿನೋತ್ ಪ್ರಿಯಾ ಹೇಳಿದರು.
ನಗರದ ಐಎಂಎ ಸಭಾಂಗಣದಲ್ಲಿ ಬುಧವಾರ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ಹಾಗೂ ಮಾರುಕಟ್ಟೆಗೆ ವಿನೂತನ ವಿನ್ಯಾಸದ ಜರಿಸೀರೆ ಬಿಡುಗಡೆಗೊಳಿಸಿ ಮಾತನಾಡಿ, ಫೆ.23ರ ವರೆಗೆ ಏರ್ಪಡಿಸಿರುವ ಪ್ರದರ್ಶನದಲ್ಲಿ ಹಣಕ್ಕೆ ತಕ್ಕಂತೆ ಉತ್ತಮ ಗುಣಮಟ್ಟದ ಸೀರೆಗಳು ದೊರೆಯಲಿವೆ ಎಂದರು.ಯನ್ನು ಡಿಸಿ ಬಿಡುಗಡೆ ಮಾಡಿದರು.
ಕೆಎಸ್‌ಐಸಿ ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಎಸ್.ಭಾನುಪ್ರಕಾಶ್ ಮಾತನಾಡಿ, ಮೇಳದಲ್ಲಿ ನಿಗಮದ ಉತ್ಪನ್ನಗಳ ಮೇಲೆ ಶೇ.25 ರಿಯಾಯಿತಿ ಇದೆ. ಕರ್ನಾಟಕದ ಅತ್ಯುತ್ತಮ ಸಾರ್ವಜನಿಕ ವಲಯದ ಉದ್ದಿಮೆಗೆಂದು ರಾಜ್ಯ ಸರ್ಕಾರ ಕೊಡುವ ಮುಖ್ಯಮಂತ್ರಿ ವಾರ್ಷಿಕ ರತ್ನ ಪ್ರಶಸ್ತಿ ನಿಗಮಕ್ಕೆ ಎರಡು ಬಾರಿ ಲಭಿಸಿದೆ ಎಂದರು.
ಮಹಿಳಾ ಸಮಾಜದ ಕಾರ್ಯದರ್ಶಿ ಮೋಕ್ಷಾ ರುದ್ರಸ್ವಾಮಿ, ಪತ್ರಿಕೋದ್ಯಮ ವಿದ್ಯಾರ್ಥಿನಿ ಶ್ವೇತಾ ಮತ್ತಿತರರು ಇದ್ದರು.
ಅಷ್ಟೊಂದು ಶಕ್ತಿ ಎಲ್ಲಿದೆ: ಪ್ರದರ್ಶನ ಉದ್ಘಾಟಿಸಿದ ಡಿಸಿ ಸೀರೆ ಖರೀದಿಗೆ ಮುಂದಾದಾಗ, ಏನ್ ಮೇಡಂ ಬಹಳಷ್ಟು ಸೀರೆಗಳನ್ನು ಖರೀದಿಸುತ್ತಿದ್ದೀರಿ ಎಂಬ ಸುದ್ದಿಗಾರರ ಕುತೂಹಲ ಭರಿತ ಪ್ರಶ್ನೆಗೆ ಬಹಳ ಸೀರೆಗಳನ್ನು ಕೊಂಡುಕೊಳ್ಳುವ ಅಷ್ಟೊಂದು ಶಕ್ತಿ ನನಗೆ ಎಲ್ಲಿದೆ. ಒಂದೇ ಸೀರೆ ಖರೀದಿ ಮಾಡಿರೋದು ಎಂದು ಹೇಳಿದರು.