ದುರ್ಗದಲ್ಲಿ ಹಂದಿಗಳ ಉಪಟಳ

ಚಿತ್ರದುರ್ಗ: ನಗರದಲ್ಲಿ ಹಂದಿಗಳಿಲ್ಲದ ಪ್ರದೇಶ ಹುಡುಕಿದರೂ ಸಿಗದ ಮಟ್ಟಕ್ಕೆ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಹೈರಾಣಾಗಿದ್ದಾರೆ.

ಯಾವುದೇ ಬಡಾವಣೆ, ರಸ್ತೆಗಳಿಗೆ ಹೋದರು ಹಂದಿಗಳು ಕಾಣಸಿಗುತ್ತವೆ. ವಾಹನ ಸವಾರರು ರಸ್ತೆಗಳಲ್ಲಿ ಓಡಾಡುವುದು ಕಷ್ಟವಾಗಿದೆ. ಕೆಲ ಪ್ರದೇಶಗಳ ಜನರು ಜೀವ ಭಯದಲ್ಲಿದ್ದಾರೆ. ಕೊಳಚೆ ಪ್ರದೇಶಗಳ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿದೆ.

ಹಂದಿಗಳ ಹಾವಳಿಯಿಂದ ಸೊಳ್ಳೆಗಳು ಹೆಚ್ಚಾಗಿ ರೋಗಗಳು ಉಲ್ಬಣಿಸುತ್ತಿವೆ. ಜನರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಮಾರ್ಚ್‌ನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಹಂದಿಗಳನ್ನು ನಗರದಿಂದ ಹೊರ ಸಾಗಿಸಲು ಸೂಚಿಸಲಾಗಿತ್ತು.

ಆದರೂ ಈವರೆಗೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಹಂದಿಗಳ ಸಂಖ್ಯೆ ನಿಯಂತ್ರಣ ಮೀರಿದೆ. ಈ ಬಗ್ಗೆ ವಿಜಯವಾಣಿ ಲೌಡ್‌ಸ್ಪೀಕರ್‌ನಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಇಲ್ಲಿವೆ.

Leave a Reply

Your email address will not be published. Required fields are marked *