More

    ಗಣಮೇಳದಲ್ಲಿ ಸಹಸ್ರಾರು ಸಂಖ್ಯೇಲಿ ದಲಿತರು

    ಚಿತ್ರದುರ್ಗ: ಬೆಂಗಳೂರಿನ ನಂದಿ ಮೈದಾನದಲ್ಲಿ ಫೆ.16ರಂದು ಆಯೋಜಿಸಿರುವ ಅಸಂಖ್ಯ ಪ್ರಮಥರ ಗಣಮೇಳದಲ್ಲಿ ರಾಜ್ಯದ ವಿವಿಧೆಡೆಯಿಂದ 30 ಸಾವಿರಕ್ಕೂ ಹೆಚ್ಚು ದಲಿತರು ಭಾಗವಹಿಸಲಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರಮಥ ಗಣಮೇಳದ ನಡೆಸುವ ಮೂಲಕ ಸಮಾನತೆ ಸಂದೇಶವನ್ನು ನಾಡಿಗೆ ಸಾರಿದ್ದರು. ಬಸವಣ್ಣನ ನಂತರ ಜಾತಿ, ವರ್ಗರಹಿತ ಸಮಾಜಕ್ಕಾಗಿ ಕ್ರಾಂತಿಕಾರಿ ಹೋರಾಟ ನಡೆಸುತ್ತಿರುವ ಶಿವಮೂರ್ತಿ ಶರಣರು ಬುದ್ಧ, ಬಸವ, ಅಂಬೇಡ್ಕರ್ ಆಶಯಗಳ ಅನುಷ್ಠಾನಕ್ಕೆ ಹೋರಾಡುತ್ತಿದ್ದಾರೆ ಎಂದರು.

    ಈಗಾಗಲೇ ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟು ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಜಾರಿಯಲ್ಲಿರುವ ಭೂಮಿ ಪರಭಾರೆ ನಿಷೇಧ ಕಾಯ್ದೆ ಲೋಪಗಳಿಂದ ದಲಿತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳು ವಂತಾಗಿದ್ದು, ಪಿಟಿಸಿಎಲ್ ಕಾಯ್ದೆಗೆ ಸಮಗ್ರ ತಿದ್ದುಪಡಿ ತರುವಂತೆ ಒಕ್ಕೂಟ ಹೋರಾಟ ನಡೆಸಲಾಗಿದೆ. ಬಜೆಟ್ ಅಧಿವೇಶನದಲ್ಲಿ ಈ ಕುರಿತಂತೆ ತಿದ್ದುಪಡಿ ಮಸೂದೆಗೆ ಆಗ್ರಹಿಸಿ ಸಿಎಂ ಹಾಗೂ ಕಂದಾಯ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು.

    ಬಹುಜನ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಆರ್.ಎಂ.ಎನ್.ರಮೇಶ್, ಸಮತಾ ಸೈನಿಕದಳ ಜಿಲ್ಲಾಧ್ಯಕ್ಷ ಸಿ.ಎಚ್.ಮಂಜುನಾಥ್, ರಿಪಬ್ಲಿಕ್ ಪಾರ್ಟಿ ಮುಖಂಡ ಬಿ.ಆರ್.ಶ್ರೀರಾಮ್, ಮುಖಂಡರಾದ ಎಂ.ವೆಂಕಟೇಶ್, ಪಿಳ್ಳೆರಾಜು, ಎಚ್.ಚನ್ನಿಗರಾಮಯ್ಯ, ಜಿಗಣಿ ನಾಗರಾಜ್ ಇದ್ದರು.

    See also  ವಿಶ್ವ ಮಹಿಳಾ ದಿನಾಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts