More

  ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕ್ಕೆ ವಿರೋಧ

  ಚಿತ್ರದುರ್ಗ: ದಲಿತ ಸಮುದಾಯ ಮತ್ತು ಸಂಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಅಂಬೇಡ್ಕರ್ ಸೇನೆ ಕಾರ‌್ಯಕರ್ತರು ಮಂಗಳವಾರ ಮನವಿ ಸಲ್ಲಿಸಿದರು.

  ದಲಿತ ಹೋರಾಟಗಾರರು ಹಾಗೂ ದಲಿತ ಸಮುದಾಯದವರನ್ನು ಅವಹೇಳನಕಾರಿಯಾಗಿ ನಿಂದಿಸಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಗೌರವಕ್ಕೂ ಧಕ್ಕೆ ಉಂಟಾಗುವಂತೆ ಪೋಸ್ಟ್ ಮಾಡುತ್ತಿದ್ದಾರೆ. ಆದರೂ ಪೊಲೀಸರು ಕ್ರಮ ಜರುಗಿಸಿಲ್ಲ. ಆದ್ದರಿಂದ ರಾಜ್ಯಸರ್ಕಾರ ಈಗಲಾದರೂ ಇವರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾರಿಗೆ ಮನವಿ ಸಲ್ಲಿಸಿದರು. ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್.ಎ ತಾಳಿಕೆರೆ, ಮುಖಂಡರಾದ ಕೆ.ಪಿ.ಶ್ರೀನಿವಾಸ್‌ಮೂರ್ತಿ, ಟಿ.ಮಂಜುನಾಥ್, ಅನಂತ್‌ಕುಮಾರ್, ಚಂದ್ರಪ್ಪ, ರೇವಣಸಿದ್ದಪ್ಪ ಬಿ.ಕಲ್ಕುಂಟೆ ಮತ್ತಿತರರು ಇದ್ದರು.

  See also  ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts