More

  ಅಭಿವೃದ್ಧಿಗೆ ಸಹಕಾರಿ ಕೊಡುಗೆ ಅಪಾರ

  ಚಿತ್ರದುರ್ಗ: ದೇಶದ ಬೆಳವಣಿಗೆಗೆ ಸಹಕಾರಿ ರಂಗದ ಕೊಡುಗೆ ಅಪಾರವಾಗಿದೆ ಎಂದು ಕಾರ್ಕಳದ ಪ್ರೇರಣಾ ಸಂಸ್ಥೆ ಸಂಚಾಲಕ ಆದರ್ಶ ಗೋಖಲೆ ಹೇಳಿದರು.

  ನಗರದ ವಾಸವಿ ಮಹಲಿನಲ್ಲಿ ಶನಿವಾರ ಸಂಜೆ ನಗರದ ಆದರ್ಶ ಸಹಕಾರಿಯ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ, ಸಹಕಾರಿ ರಂಗ ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯವಾಗಿದ್ದು ದೇಶದ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.

  ಮರ್ಚೆಂಟ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮೀಕಾಂತ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಹಕಾರಿ ಅಧ್ಯಕ್ಷ ಡಿ.ಆರ್.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಎನ್.ಚಂದ್ರಶೇಖರ್, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಸ್.ಶಿವಮೂರ್ತಿ ಇದ್ದರು. ಶಿಕ್ಷಕ ಪರಮೇಶ್ವರಪ್ಪ ಕುದರಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts