More

    ವಿವೇಕಾನಂದ ಬದುಕು ಭಾರತದ ಪ್ರತಿಬಿಂಬ

    ಚಿತ್ರದುರ್ಗ: ಭಾರತ ಎಂಬ ಬೃಹತ್ ರಾಷ್ಟ್ರದ ಕುರಿತು ತಿಳಿದುಕೊಳ್ಳಲು ಸ್ವಾಮಿ ವಿವೇಕಾನಂದರ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿದರೆ ಸಾಕು ಎಂದು ಶಾರದಾ ರಾಮಕೃಷ್ಣ ಆಶ್ರಮದ ಶ್ರೀ ಬ್ರಹ್ಮನಿಷ್ಠಾನಂದ ಸ್ವಾಮೀಜಿ ಹೇಳಿದರು.

    ಜಿಲ್ಲಾಡಳಿತದಿಂದ ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿವೇಕಾನಂದರ ಬದುಕು ಅರಿತರೆ ದೇಶದ ಸಂಸ್ಕೃತಿ, ವೈಭವ ಪರಿಚಯ ಆಗಲಿದೆ ಎಂದರು.

    ವಿವೇಕಾನಂದರ ಸಂದೇಶ ಜೀವನದಲ್ಲಿ ಪ್ರತಿ ವ್ಯಕ್ತಿ ಅಳವಡಿಸಿಕೊಳ್ಳಬೇಕು. ಇದರಿಂದ ಉತ್ತಮ, ಸಮ ಸಮಾಜ, ಸೌಹಾರ್ದ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದರು.

    ಎಂಎಲ್ಸಿ ಜಯಮ್ಮ ಬಾಲರಾಜ್ ಮಾತನಾಡಿ, ಕೇವಲ 39 ವರ್ಷ ಜೀವಿಸಿದರೂ ಜಗತ್ತು ನಿಬ್ಬೆರಗಾಗುವಂತ ಸಾಧನೆ ವಿವೇಕಾನಂದರು ಮಾಡಿದರು ಎಂದು ತಿಳಿಸಿದರು.

    ನಗರದ ಸರ್ಕಾರಿ ಪದವಿ ಕಾಲೇಜ್ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಲ್ಯಾಪ್‌ಟಾಪ್ ಈ ವೇಳೆ ವಿತರಿಸಲಾಯಿತು. ವಿವೇಕಾನಂದರ ಜಯಂತಿ ಅಂಗವಾಗಿ ನಗರದ ವಿವಿಧ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಚರ್ಚೆ, ಪ್ರಬಂಧ, ಆಶುಭಾಷಣ ಸೇರಿ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

    ವಿಜೇತರ ವಿವರ: ಪ್ರಬಂಧ ಸ್ಪರ್ಧೆ-ಜ್ಯೋತಿ ಹೆಬ್ಬಾರೆ, ಒ.ಸ್ಪಂದನಾ, ಎಚ್.ಆರ್.ಗೋವಿಂದರಾಜು, ಕೆ.ಜಿ.ಆಶಾ, ಕಾವ್ಯಾ, ಎಚ್.ಮಮತಾ, ಆರ್.ಶ್ವೇತಾ, ನಟರಾಜ ಸಿ.ನಾಯಕ್, ಆರ್.ಶಿಲ್ಪಾ, ಜಿ.ಪಿ.ಆಶಾ. ಚರ್ಚೆ-ಮೆಹರ್ ತಾಜ್, ಗೋಪಿಕಾ, ಸಂಜಯ್, ರಕ್ಷಿತಾ, ಸುಪ್ರಿಯಾ. ಆಶುಭಾಷಣ-ಮಧುರಾ, ರಕ್ಷಿತಾ ವಿಜೇತರು.

    ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಉಪ ವಿಭಾಗಾಧಿಕಾರಿ ವಿ.ಪ್ರಸನ್ನ, ಜಿಪಂ ಮುಖ್ಯ ಯೋಜನಾಧಿಕಾರಿ ಶಶಿಧರ್, ನಗರಸಭೆ ಪೌರಾಯುಕ್ತ ಜೆ.ಟಿ ಹನುಮಂತರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ನಾಗರಾಜ, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಬಸವರಾಜ್, ಪ್ರೊ.ಕೆ.ಕಾಮಾನಿ. ಪ್ರೊ.ನಾಗಾರಾಜಪ್ಪ, ಪ್ರಾಧ್ಯಾಪಕ ಶರಣಪ್ಪ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts