ರಾಮಾಂಜನೇಯಗೆ ಕಂಚಿನ ಪದಕ

ಚಿತ್ರದುರ್ಗ: ಕರ್ನಾಟಕ ಪವರ್ ಲಿಪ್ಟಿಂಗ್ ಅಸೋಸಿಯೇಷನ್‌ನಿಂದ ಭದ್ರಾವತಿಯಲ್ಲಿ ಆಯೋಜಿಸಿದ್ದ ರಾಜ್ಯ ಸೀನಿಯರ್ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಚಿತ್ರದುರ್ಗದ ರಾಮಾಂಜನೇಯ ನಾಯಕ್ ಕಂಚಿನ ಪದಕ ಗಳಿಸಿದ್ದಾರೆ.

ಪುರುಷರ ವಿಭಾಗದ 93 ಕೆಜಿ ವಿಭಾಗದಲ್ಲಿ 540 ಕೆಜಿ ಭಾರ ಎತ್ತುವ ಮೂಲಕ ರಾಮಾಂಜನೇಯ ನಾಯಕ್ ಮೂರನೇ ಸ್ಥಾನಗಳಿಸಿದ್ದಾನೆ.

ಬೆಸ್ಕಾಂ ಉದ್ಯೋಗಿ ಹಾಗೂ ಮದಕರಿ ನಾಯಕ ವ್ಯಾಯಾಮ ಶಾಲೆ ಕ್ರೀಡಾಪಟು ಆಗಿದ್ದು, ಬಹುವರ್ಷದ ನಂತರ ಸ್ಪರ್ಧೆಯಲ್ಲಿ ಚಿತ್ರದುರ್ಗ ಸ್ಥಾನಗಳಿಸಿದೆ ಎಂದು ಕ್ರೀಡಾಸಂಘದ ಅಧ್ಯಕ್ಷ ಜಿ.ಎಚ್.ಮೋಹನ್, ಅಂತಾರಾಷ್ಟ್ರೀಯ ಕ್ರೀಡಾಪಟು ಎನ್.ಡಿ.ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *