More

  ಚಿತ್ರದುರ್ಗದ ವಿವಿಧೆಡೆ ಗಣರಾಜ್ಯೋತ್ಸವ

  ಚಿತ್ರದುರ್ಗ: ನಗರದ ವಿವಿಧೆಡೆ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

  ಆಸ್ಕರ್ ಶಾಲೆ: ನಗರದ ಆಸ್ಕರ್ ಫರ್ನಾಂಡಿಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ಪ್ರಾಂಶುಪಾಲ ಯೋಗೀಶ್ ಸಹ್ಯಾದ್ರಿ ಮಾತನಾಡಿದರು.

  ಕಚೇರಿ ಅಧೀಕ್ಷಕ ಎ.ನಂದೀಶ್, ಪಿಆರ್‌ಒ ಹರೀಶ್, ದೈಹಿಕ ಶಿಕ್ಷಣ ಶಿಕ್ಷಕ ಬಿ.ಪಾಪಣ್ಣ, ಶಿಕ್ಷಕರಾದ ಶಿವಾನಂದ್.ಜಿ.ಸಿ.ಪುನೀತ್‌ಕುಮಾರ್, ಈ.ಮಮತಾ, ಎಸ್.ಮಂಜುಳಾ, ಜಿ.ಟಿ.ಕವಿತಾ, ಅಸೀಮಾ, ಸಬಾ, ಶಾಜಾದಿ, ಟಿ.ಗಿರಿಜಾ ಮತ್ತಿತರರು ಇದ್ದರು.

  ಡಯಟ್: ಪ್ರಭಾರ ಪ್ರಾಂಶುಪಾಲ ಎಚ್.ಗಂಗಯ್ಯ ಧ್ವಜಾರೋಹಣ ನೆರವೇರಿಸಿದರು. ಹೇಳಿದರು.

  ಹಿರಿಯ ಉಪನ್ಯಾಸಕರಾದ ಡಿ.ಕೃಷ್ಣಮೂರ್ತಿ, ಪಿ.ರಾಜಣ್ಣ, ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ ರಾಣಿ, ಉಪನ್ಯಾಸಕರು, ಅಧಿಕಾರಿ, ಸಿಬ್ಬಂದಿ ಇದ್ದರು.

  ಜಿಲ್ಲಾ ಕಾಂಗ್ರೆಸ್ ಕಚೇರಿ: ಗಾಂಧಿ ಹಾಗೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿಮಾತನಾಡಿದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ದೇಶದ ಸಂವಿಧಾನ ಆಪತ್ತಿನಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

  ದೇಶದಲ್ಲಿ ಕೇಸರಿ ಸಂವಿಧಾನವನ್ನು ಜಾರಿಗೊಳಿಸಲು ಬಿಜೆಪಿ ಮುಂದಾಗಿದ್ದು, ಇದಕ್ಕೆ ತಡೆ ಹಾಕಲು ಯುವ ಪೀಳಿಗೆ ಪ್ರತಿಭಟನೆ ತೀವ್ರಗೊಳಿಸಬೇಕು ಎಂದರು.

  ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಸಿ.ಶಿವುಯಾದವ್, ಮಾಜಿ ಅಧ್ಯಕ್ಷ ಫಾತ್ಯರಾಜನ್, ಹಿರಿಯ ಉಪಾಧ್ಯಕ್ಷ ಶಬ್ಬೀರ್ ಅಹಮದ್, ನಜ್ಮತಾಜ್, ಭೀಮುಸಮುದ್ರದ ಜಿ.ಎಸ್.ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ, ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ, ಪೌರ ನೌಕರ ಸಂಘದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಇತರರಿದ್ದರು.

  ಜಿಲ್ಲಾ ಮುಸ್ಲಿಂ ಹಾಸ್ಟೆಲ್: ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಧ್ವಜಾರೋಹಣ ನೆರವೇರಿಸಿದರು. ಹಾಸ್ಟೆಲ್ ಆಡಳಿತಾಧಿಕಾರಿ ಟಿ.ಆರ್.ಮೊಹಮದ್ ನಾಸಿರುದ್ದಿನ್, ಸಲಹೆಗಾರರಾದ ಕೆ.ಎಂ.ಯೂಸೂಫ್, ಜಿ.ಆರ್.ಖಾನ್, ಎಸ್.ಸಮೀವುಲ್ಲಾ, ಮೆಹಬೂಬ್‌ಸಾಬ್, ಸಾಧಿಕ್‌ವುಲ್ಲಾ ಆಜಾದ್, ಡಾ.ಖಲೀಲ್‌ಖಾನ್, ಡಾ.ರಹಮತ್‌ವುಲ್ಲಾ, ಎಚ್.ಜಿ.ಉಸ್ಮಾನ್‌ಖಾನ್, ವಕೀಲ ಜುಲ್ಫಿಕರ್ ಅಹ್ಮದ್, ಅತೀಖ್ ಅಹ್ಮದ್, ಎಬಿಸಿ ಅನ್ವರ್‌ಪಾಷ, ಅಬ್ದುಲ್ಲಾ, ಹಾಸ್ಟೆಲ್‌ನ ವಿದ್ಯಾರ್ಥಿಗಳು, ಶಿವಮೊಗ್ಗದ ಅಲ್ಹಾಜ್ ಟಿ.ನೂರ್ ಮಹಮದ್ ಮತ್ತಿತರರು ಇದ್ದರು.

  ಕಮ್ಯುನಿಸ್ಟ್ ಪಾರ್ಟಿ: ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‌ಬಾಬು ಧ್ವಜಾರೋಹಣ ನೆರವೇರಿಸಿದರು. ತಾಲೂಕು ಕಾರ್ಯದರ್ಶಿ ಟಿ.ಆರ್.ಉಮಾಪತಿ, ಸತೀಶ್, ಚಂದ್ರಪ್ಪ, ಡಿ.ಸಿ.ಹಾಲಸ್ವಾಮಿ, ತಿರುಮಲೇಶ್ ಜಾದವ್, ತಿಪ್ಪೇಸ್ವಾಮಿ, ಜಾಕಿರ್ ಇತರರಿದ್ದರು.

  ವಕ್ಫ್ ಮಂಡಳಿ: ನಗರದ ವಕ್ಫ್ ಮಂಡಳಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ವಕ್ಫ್‌ಬೋರ್ಡ್‌ಅಧ್ಯಕ್ಷ ಅಸ್ಲಂಪಾಷ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಂಡಳಿ ಸಿಬ್ಬಂದಿ ಇದ್ದರು.

  ಚಿತ್ರದುರ್ಗ ವೆಲ್‌ಫೇರ್ ಅಸೋಸಿಯೇಷನ್ ಹಾಗೂ ಟಿಪ್ಪು ಮೆಮೋರಿಯಲ್ ಹಾಲ್ ಕಮಿಟಿ: ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪುಖಾಸಿಂ ಆಲಿ, ಚಿತ್ರದುರ್ಗ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಶೇಕ್ ನಯಾಜ್, ಆಡಳಿತಾಧಿಕಾರಿ ನಾಸಿರುದ್ದಿನ್, ಸೈಯದ್ ನಾಸಿರ್, ಅಪ್ಸರ್ ಕರೀಂ ಮತ್ತಿತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts