ಚಿತ್ರದುರ್ಗ: ನಗರದ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಕ್ರಾಸ್ ಕಂಟ್ರಿ ರೋಡ್ ರೇಸ್‌ಗೆ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಭಾನುವಾರ ಒನಕೆ ಓಬವ್ವ ಕ್ರೀಡಾಂಗಣ ಬಳಿ ಚಾಲನೆ ನೀಡಿದರು.
115 ಮಹಿಳಾ ಹಾಗೂ 335 ಪುರುಷ ಸ್ಪರ್ಧಿಗಳು ಭಾಗವಹಿಸಿದ್ದರು. ಪುರುಷರ 10 ಕಿ.ಮೀ, ಮಹಿಳೆಯರ 6 ಕಿ.ಮೀ, 18 ವರ್ಷದ ವಯಸ್ಸಿನ ಬಾಲಕ ಹಾಗೂ ಬಾಲಕಿಯರಿಗೆ 5 ಕಿ.ಮೀ. ಮತ್ತು 14 ವರ್ಷ ವಯಸ್ಸಿನ ಒಳಗಿರುವ ಬಾಲಕ, ಬಾಲಕಿಯರಿಗೆ 1 ಕಿ.ಮೀ. ಸ್ಪರ್ಧೆ ನಡೆಯಿತು.
14 ವರ್ಷ ವಯಸ್ಸಿನ ಒಳಗಿರುವ ಬಾಲಕ, ಬಾಲಕಿಯರ ಸ್ಪರ್ಧೆ ಮದಕರಿ ವೃತ್ತ ಹಾಗೂ ಉಳಿದವರ ಸ್ಪರ್ಧೆ ಕ್ರೀಡಾಂಗಣದಿಂದ ಆರಂಭಗೊಂಡಿತು. 14 ವರ್ಷ ವಯೋಮಾನದೊಳಗಿನ ಸ್ಪರ್ಧಿಗಳನ್ನು ಹೊರತು ಪಡಿಸಿ ಉಳಿದವರು, ಟೀಚರ್ಸ್ ಕಾಲನಿ, ಜೋಗಿಮಟ್ಟಿ ರಸ್ತೆ, ಮದಕರಿ ನಾಯಕ ವೃತ್ತ, ದೊಡ್ಡಪೇಟೆ, ಚಿಕ್ಕಪೇಟೆ, ಗಾಂಧಿವೃತ್ತ, ಜೆ.ಸಿ.ಆರ್.ಬಡಾವಣೆ ಇತ್ಯಾದಿ ಪ್ರಮುಖ ರಸ್ತೆಗಳು ನಿರ್ದಿಷ್ಟ ಗುರಿ ತಲುಪಿದರು.