ಚಿತ್ರದುರ್ಗ: ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆ ವಿರೋಧಿಸಿ ಮುಸ್ಲಿಂ ಅಡ್ವೋಕೇಟ್ಸ್ ವೆಲ್ಫೆರ್ ಟ್ರಸ್ಟ್‌ನ ವಕೀಲರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಧರಣಿ ನಡೆಸಿದರು.
ಟ್ರಸ್ಟ್‌ನ ಅಧ್ಯಕ್ಷ ಎಚ್.ಎಂ.ನೆಮತ್‌ವುಲ್ಲಾ ಮಾತನಾಡಿ, ಕೇಂದ್ರ ಸರ್ಕಾರದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ದೇಶದ ಅಲ್ಪಸಂಖ್ಯಾತರಿಗೆ, ದಲಿತರಿಗೆ, ಬುಡಕಟ್ಟು ಸಮುದಾಯದವರಿಗೆ ಮಾರಕವಾಗಿದೆ. ದೇಶದಲ್ಲಿ ಲಕ್ಷಾಂತರ ಮಂದಿ ಬುಡಕಟ್ಟು ಸಮುದಾಯದವರಿಗೆ ಓದು, ಬರಹ ಗೊತ್ತಿಲ್ಲ. ಅವರು ಎಲ್ಲಿಂದ ದಾಖಲಾತಿಗಳನ್ನು ಸಲ್ಲಿಸುತ್ತಾರೆ ಎಂದು ಪ್ರಶ್ನಿಸಿದರು.
ಪಾಕಿಸ್ತಾನ, ಬಾಂಗ್ಲ, ಆಪಘಾನಿಸ್ತಾನದಿಂದ 2014 ಕ್ಕಿಂತಲೂ ಮೊದಲು ಬಂದ 6 ಧರ್ಮಿಯರನ್ನು ಅಕ್ರಮ ವಲಸಿಗರೆಂದು ಪರಿಗಣಿಸಬಾರದು. ಭಾರತದ ಸಂವಿಧಾನ ಅನುಚ್ಛೇದ 14-15 ವಿಧಿಗಳು ಧರ್ಮ ಮತ್ತು ಜಾತಿಗಳ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಿರ್ಬಂಧಿಸಿದೆ. ಆದರೆ, ಈ ಕಾಯ್ದೆಯಲ್ಲಿ ಒಂದು ಧರ್ಮವನ್ನು ಹೊರತುಪಡಿಸಿ ಉಳಿದವರಿಗೆ ಪೌರತ್ವ ಕೊಡುವುದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಉಂಟು ಮಾಡಿದಂತೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಸಮಿವುಲ್ಲಾ, ಎ.ಸಯ್ಯದ್, ನಜೀಬುಲ್ಲಾ, ಬಿ.ಕೆ.ರಹಮತ್ ವುಲ್ಲಾ, ನೂರ್ ಹಸನ್ ಮತ್ತಿತರರು ಪಾಲ್ಗೊಂಡಿದ್ದರು.
ಸಿಎಎ, ಎನ್‌ಆರ್‌ಸಿಗೆ ವಕೀಲರ ಪರ-ವಿರೋಧ
2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life
Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…
ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು
ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…
ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips
Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…