ಚಿತ್ರದುರ್ಗ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಕೀಲರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನ್ಯಾಯಾಲಯ ಆವರಣದಿಂದ ಮೆರವಣಿಗೆ ಮೂಲಕ ಡಿಸಿಗೆ ಕಚೇರಿಗೆ ಆಗಮಿಸಿದ ವಕೀಲರು ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ವಕೀಲ ಬಿ.ಕೆ.ರಹಮತ್‌ವುಲ್ಲಾ, ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ನಿಂದ ದೇಶದ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದರು.
ವಕೀಲ ಸಿ.ಶಿವುಯಾದವ್ ಮಾತನಾಡಿ, ಸಿಎಎ ಅವೈಜ್ಞಾನಿಕ ಕಾಯ್ದೆಯಾಗಿದೆ ಎಂದರು.
ವಕೀಲರಾದ ಫಾತ್ಯರಾಜನ್, ಶರಣಪ್ಪ, ರವೀಂದ್ರ, ರಾಜಣ್ಣ, ಸೈಯದ್ ನೂರುಲ್ಲಾ ಹಸನ್, ಸೈಯದ್ ನಜೀಬುಲ್ಲಾ, ನರಸಿಂಹ, ಸುದರ್ಶನ್, ವಹೀದಾಬಾನು, ಮೆಹರೋಜ್‌ಬೇಗಂ ಮತ್ತಿತರರು ಪ್ರತಿಭಟನೆಯಲ್ಲಿದ್ದರು.