ಚಿತ್ರದುರ್ಗ: ಮಕ್ಕಳಿಗೆ ಶಿಸ್ತು, ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಹೊಣೆ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಈಸ್ಟ್ ಫೋರ್ಟ್ ಶಾಲೆ ಮುಖ್ಯಶಿಕ್ಷಕ ತಿಪ್ಪೇರುದ್ರಯ್ಯ ತಿಳಿಸಿದರು.
ನಗರದ ಈಸ್ಟ್ ಫೋರ್ಟ್ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ಬಾಲ ಸಂಸ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆಗೆ ಸೇರಿಸಿದರೆ ನಮ್ಮ ಕರ್ತವ್ಯ ಮುಗಿಯಿತು ಎಂದು ಭಾವಿಸುವ ಪಾಲಕರು ಹೆಚ್ಚಾಗಿದ್ದಾರೆ. ಎಲ್ಲದಕ್ಕೂ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ. ಮನೆಯೇ ಮೊದಲ ಪಾಠಶಾಲೆ. ಈ ಮಾತನ್ನು ಪಾಲಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಯೋಗಗುರು ರವಿ ಕೆ.ಅಂಬೇಕರ್, ಶಿಕ್ಷಕರಾದ ಎಂ.ಜಯಶೀಲಾ, ವಿ.ಉಷಾ, ಶೈಲಜಾ, ಪ್ರಿಯಾಂಕಾ, ಪವಿತ್ರಾ ಇತರರು ಉಪಸ್ಥಿತರಿದ್ದರು.